ADVERTISEMENT

‘ಬಸವಣ್ಣನ ತತ್ವ ಅಳವಡಿಕೆ ಸಮಾಜ ಸುಧಾರಣೆಗೆ ಮದ್ದು’

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:12 IST
Last Updated 27 ಮೇ 2017, 9:12 IST

ವಿಜಯಪುರ:  ಬಸವೇಶ್ವರರ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ, ನೆಮ್ಮದಿ ಜೀವನ ಕಂಡು ಕೊಳ್ಳಲು ಸಾಧ್ಯ ಎಂದು ಡಾ.ರವಿಕುಮಾರ ಬಿರಾದಾರ ಹೇಳಿದರು.

ಇಲ್ಲಿನ ಮಲ್ಲಿಕಾರ್ಜುನ ನಗರದ ಶಿವಾಲಯದಲ್ಲಿ  ಬಸವ ಬಳಗ, ಶ್ರೀನಗರ ಗೆಳೆಯರ ಬಳಗ, ಶಿವಾಲಯ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜಕ್ಕೆ ಅಂಟಿಕೊಂಡಿರುವ ಜಾತಿ ಭೇದ ಎಂಬ ಅನಿಷ್ಟ ಪದ್ಧತಿಯನ್ನು ಕಿತ್ತೊಗೆಯಬೇಕಿದೆ. ಬಸವಣ್ಣನವರ ಮೂಲ ಉದ್ದೇಶವೂ ಇದೇ ಆಗಿತ್ತು’ ಎಂದರು. ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಮೇತ್ರಿ, ‘ಬಸವಣ್ಣನ ತತ್ವಗಳು, ಉದ್ದೇಶ, ದೂರದೃಷ್ಟಿಯ ಚಿಂತನೆ ಗಳ ಮೇಲೆ ಇಂದಿನ ಜಗತ್ತು ಮುಂದುವ ರಿಯುತ್ತಿದೆ. ಜಗತ್ತಿನಾದ್ಯಂತ ಅವರ ಆದರ್ಶಗಳು ಪಸರಿಸಿರುವುದೇ ಅವರ ಶಕ್ತಿ ಏನು ಎಂಬುವುದು ತಿಳಿಯುತ್ತದೆ‘ ಎಂದರು.

ADVERTISEMENT

ಶಿವಾಲಯ ಟ್ರಸ್ಟ್‌ನ ಉಪಾಧ್ಯಕ್ಷ ಎಸ್.ಎಸ್.ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಬುರ್ಲಿ, ಬಸವರಾಜ ಕೊಂಡಗೂಳಿ, ಮಹೇಶ ಅನಂತಪೂರ, ಅಮಿತ ಬಿರಾದಾರ, ರವಿ ಚವ್ಹಾಣ, ಡಾ.ಮಹಾಂತೇಶ ಮಡಿಕೇಶ್ವರ, ಡಾ.ಎಸ್.ಜಿ.ಪಾಟೀಲ, ಶಾಂತಗೌಡ ಬಿರಾದಾರ, ಗೀತಮಾಲಾ ಪಾಟೀಲ, ಅಪ್ಪು ಶಿರೋಳಮಠ, ಮಂಜುನಾಥ ಅಡ್ಡಿ ಇದ್ದರು.ಶರಣು ಬಸ್ತಾಳ ಗಾಯನ ನಡೆಸಿ ಕೊಟ್ಟರು. ಉದಯ ನಾವಲಗಿ ನಿರೂಪಿಸಿ, ಅಮರೇಶ ಸಾಲಕ್ಕಿ ಸ್ವಾಗತಿಸಿ ದರು, ಬಸವರಾಜ ಬೈಚಬಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.