ADVERTISEMENT

‘ಭೈರವಾಡಗಿ ದೇವರ ಹಿಪ್ಪರಗಿ ವ್ಯಾಪ್ತಿಯಲ್ಲಿಯೇ ಇರಲಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:10 IST
Last Updated 17 ಏಪ್ರಿಲ್ 2017, 6:10 IST

ಇಂಡಿ:  ದೇವರಹಿಪ್ಪರಗಿ ತಾಲ್ಲೂಕು ಘೋಷಣೆಯಾಗಿದ್ದು, ಭೈರವಾಡಗಿ ಗ್ರಾಮವನ್ನು ಕೊಂಡಗೂಳಿ ಹೋಬಳಿ ಮಟ್ಟಕ್ಕೆ ಸೇರಿಸದೇ ದೇವರಹಿಪ್ಪರಗಿ ಹೋಬಳಿಗೆ  ಸೇರಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ ವಿರೂಪಾಕ್ಷಪ್ಪ ಬಣಕಾರ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮುಖಂಡ ಎಚ್.ಎಂ.ಉತ್ನಾಳ ಮಾತನಾಡಿ, ಭೈರವಾಡಗಿಯಿಂದ ಕೊಂಡಗೂಳಿ ದೂರವಾಗುತ್ತೆ. ಗ್ರಾಮದ ಪಕ್ಕದಲ್ಲಿಯೇ ಡೋಣಿ ನದಿ ಹರಿದಿರುವುದರಿಂದ ಡೋಣಿ ನದಿಯನ್ನು ದಾಟಿ ಹೋಗಬೇಕು. ಮಳೆಗಾಲದಲ್ಲಿ ಸಂಚಾರ ಕಷ್ಟವಾಗುವುದು ಎಂದು ಅವರು ಹೇಳಿದರು. 

ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ  ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.ಮುಖಂಡರಾದ ವಕೀಲ ವಿ.ಎಸ್.ಪಾಟೀಲ, ಎಚ್.ಎಂ.ಉತ್ನಾಳ, ಎಸ್.ಎಸ್.ಉತ್ನಾಳ, ಕೆ.ಎಚ್.ಸೋಮಪುರ, ಎಸ್.ಎಸ್.ಬಿರಾದಾರ, ಎಂ.ಜಿ.ಬಿರಾದಾರ, ಇಸ್ಮಾಯಿಲ್‌ ಕರ್ಜಗಿ, ಎಸ್.ಬಿ.ಪೂಜಾರ, ಬಾಬು ಡಂಬಳ, ಎಚ್.ಎಸ್.ಬಿರಾದಾರ, ಭೀಮರಾಯ ಕುಂಬಾರ, ಬಿ.ಪಿ.ಕರಜಗಿ, ಬಸಪ್ಪ ಸಜ್ಜನ, ಆಯ್.ಎಲ್.ಶಾಬಾದಿ, ಎನ್.ಎಸ್.ಬಿರಾದಾರ, ಬಸಪ್ಪ ನಾಗೂರ, ಎನ್.ಎಚ್.ಬಿರಾದಾರ, ಆರ್.ಎಸ್.ವಿಜಾಪುರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.