ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ನ್ಯಾಯಾಧೀಶ ಪಿ.ಶ್ರೀನಿವಾಸ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:14 IST
Last Updated 15 ಏಪ್ರಿಲ್ 2017, 5:14 IST

ವಿಜಯಪುರ: ಮಕ್ಕಳಿಗೆ ಒಳ್ಳೆಯ ನಡತೆ, ವರ್ತನೆ, ಮಾತು ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಪಿ.ಶ್ರೀನಿವಾಸ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುನಿಸೆಫ್ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಗುರುವಾರ ನಗರದ ರುಡ್‌ಸೆಟ್‌ನಲ್ಲಿ ಆಯೋಜಿಸಿದ್ದ ಇಂಡಿ, ಸಿಂದಗಿ, ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಕ್ಕಳ ಸಂರಕ್ಷಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿದ ಅವರು ಮಾತನಾಡಿದರು.

ಮಕ್ಕಳು ದೇಶದ ಸಂಪತ್ತು. ಮಗು ಬೆಳವಣಿಗೆಗೆ ತೊಂದರೆಯಾದರೆ ಸಮಾಜದ ಮೇಲೆ ಪರಿಣಾಮ ವಾಗುತ್ತದೆ. ಮಕ್ಕಳನ್ನು ನಿರ್ಲಕ್ಷ್ಯಿಸದೆ ರಕ್ಷಣೆ–ಪೋಷಣೆ, ಆಹಾರ, ವೈದ್ಯಕೀಯ ಸೌಲಭ್ಯ ಕೊಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಟಿ.ಎಂ.ಶಶಿಧರ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಬಚಪನ್ ಬಚಾವೋ ಸಂಸ್ಥೆಯ ಮುಖ್ಯಸ್ಥರಾದ ಕೈಲಾಸ ಸತ್ಯಾರ್ಥಿಗೆ ಮಕ್ಕಳ ಸಂರಕ್ಷಣೆ ಮಾಡಿದ್ದಕ್ಕಾಗಿ ನೊಬೆಲ್‌ ಶಾಂತಿ ಪ್ರಶಸ್ತಿ ಸಿಕ್ಕಿದೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಟ್ಟು ಪಾಲನೆ ಪೋಷಣೆ ಸರಿಯಾಗಿ ಮಾಡಿದರೆ ಅವರ ಬದುಕು ಉಜ್ವಲವಾಗುತ್ತದೆ ಎಂದರು.   

ಬಾರ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಎಸ್.ಗಾಳಿ,  ಸಂಪ ನ್ಮೂಲ ವ್ಯಕ್ತಿಗಳಾದ ಹರೀಶ ಜೋಗಿ. ಕೆ. ಶಿವರಾಮ್, ಸೋಮಶೇಖರ ಇ ದ್ದರು. ನಿರ್ಮಲಾ ಸುರಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾ ಡಿದರು.  ಗುರುರಾಜ ಇಟಗಿ ನಿರೂಪಿಸಿದರು, ವಾಣಿಶ್ರೀ ನಿಂಬಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.