ADVERTISEMENT

ಮಲಘಾಣದಲ್ಲಿ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:57 IST
Last Updated 9 ನವೆಂಬರ್ 2017, 9:57 IST

ಆಲಮೇಲ: ಸಮೀಪದ ಮಲಘಾಣ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಭಕ್ತರ ಹರ್ಷೋದ್ಗಾರದ ನಡುವೆ, ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಪೀಠಾಧಿಪತಿ ಜಡೆಯ ಶಾಂತಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ಕಲಕೇರಿಯ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಜಂಗಮ ಗಣಾರಾಧನೆ, ಪ್ರಸಾದ ವಿತರಣೆ ಜರುಗಿದವು.

ಕಳೆದ 21 ದಿನಗಳಿಂದ ಸಾಗಿ ಬಂದ ಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಧರ್ಮಸಭೆ ನಡೆಯಿತು. ಪುರಾಣಿಕರಾದ ಶಂಭುಲಿಂಗಯ್ಯ ಶಾಸ್ತ್ರಿ ಗೊಬ್ಬುರ, ಚನ್ನಮಲ್ಲಯ್ಯ ಗವಾಯಿ ಅಂಕಲಗಿ, ತಬಲಾ ಸಾಥ್ ನೀಡಿದ ವೀರೇಶ ಹಿರೇಮಠ ಜೇವರ್ಗಿ ಉಪಸ್ಥಿತರಿದ್ದರು.

ಸಾಯಂಕಾಲ 5ಕ್ಕೆ ಡೊಳ್ಳು, ಬಾಜಿ, ಹಲಗೆಮೇಳ, ಬ್ಯಾಂಜೊಗಳ ಝೇಂಕಾರದೊಂದಿಗೆ, ಪಟಾಕಿ ಬಾಣ ಬಿರುಸುಗಳ ಚಿತ್ತಾರದೊಂದಿಗೆ ಪುರವಂತರ ಸೇವೆಯೊಂದಿಗೆ ಮಹಾ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ರಾತ್ರಿ 10ಕ್ಕೆ ‘ವನಕಾಂಡ– ಯುದ್ದಕಾಂಡ’ ಎಂಬ ಪೌರಾಣಿಕ ಬಯಲಾಟ ಪ್ರದರ್ಶನ ನಡೆಯಿತು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.