ADVERTISEMENT

ರಸ್ತೆ ವಿಸ್ತರಣೆ ಕಾರ್ಯಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:08 IST
Last Updated 27 ಮೇ 2017, 9:08 IST

ಬಸವನಬಾಗೇವಾಡಿ:  ತಾಲ್ಲೂಕಿನ ಕಾಮನಕೇರಿ ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಗೆ ಹೊಂದಿಕೊಂಡಿರುವ ಜಮೀನುಗಳಿಗೆ ಹೋಗುವ ರಸ್ತೆ ವಿಸ್ತರಣೆ ಮಾಡುವುದನ್ನು ವಿರೋಧಿಸಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶಾಲೆಯ ಪಕ್ಕದಲ್ಲಿರುವ ಜಮೀನು ಗಳಿಗೆ ಹಾಗೂ ಗುಡ್ಡದಲ್ಲಿರುವ ಯಲ್ಲಾಲಿಂಗ ಪುಣ್ಯಾಶ್ರಮಕ್ಕೆ ತೆರಳುವ ರಸ್ತೆ ವಿಸ್ತರಣೆ ಮಾಡುವುದರಿಂದ ಹೊಲಗಳ ಬದುಗಳಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿದ ಪ್ರತಿಭಟನಾ ಕಾರರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. 

ಶಿವಣ್ಣ ಬಾಗೇವಾಡಿ, ರವೀಂದ್ರ ನಾಯ್ಕೋಡಿ, ಉಮೇಶ ನಾಯಕ ಮಾತನಾಡಿ, ಈಗಿರುವ ರಸ್ತೆಯು ಒಂದು ಎತ್ತಿನ ಗಾಡಿ ಹೋಗುವಷ್ಟು ಅಗಲ ಇದೆ. ಇದೀಗ ಕೆಲವರು ಪಕ್ಕದ ಜಮೀನುಗಳಿಗೆ ತೊಂದರೆಯಾಗುವಂತೆ  ರಸ್ತೆ ನಿರ್ಮಿ ಸಲು ಮುಂದಾಗುತ್ತಿದ್ದಾರೆ. ಇದ ರಿಂದಾಗಿ ರೈತರಿಗೆ ಅನ್ಯಾಯ ಮಾಡಿ ದಂತಾಗುತ್ತದೆ ಎಂದರು.

ADVERTISEMENT

ಮಳೆಗಾಲದಲ್ಲಿ ಗುಡ್ಡದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವುದರಿಂದ ಜಮೀನುಗಳ ಒಡ್ಡು ಒಡೆದು ಹೋಗುವ ಸಾಧ್ಯತೆಗಳೇ ಹೆಚ್ಚು. ಈ ರಸ್ತೆ ಮಾರ್ಗಾವಾಗಿ ಚರಂಡಿ ವ್ಯವಸ್ಥೆ ಕಲ್ಪಿಸಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಅದನ್ನು ಬಿಟ್ಟು ರಸ್ತೆ ವಿಸ್ತರಣೆಗೆ ಮುಂದಾಗಿರುವುದರಿಂದ ಅಮಾಯಕ ರೈತರಿಗೆ ಅನ್ಯಾಯ ಮಾಡಿ ದಂತಾಗುತ್ತದೆ ಎಂದು ಆರೋಪಿಸಿದರು.

ಗುರುಶಾಂತಪ್ಪ ಗುಂಡಕರ್ಜಿ, ಬೀರಪ್ಪ ಗುಂಡಕರ್ಜಿ, ಸಾಯಬಣ್ಣ ಗುಂಡಕರ್ಜಿ, ಹಣಮಂತ ಮಗ್ಗದ, ಅಡಿವೆಪ್ಪ ಬಾಗೇವಾಡಿ, ಸಲಿಂ ಮುಜಾವಾರ, ವಿಜಯ ಖಾನಾಪೂರ, ಬುಡ್ಡೇಸಾ ಮುಜಾವರ, ಖಾಜು ಬೈರವಾಡಗಿ, ಗಂಗಾಧರ ಹಂಚಲಿ, ಸಿದ್ದಮ್ಮ ಗುಂಡಕರ್ಜಿ, ಚಂದವ್ವ ಮಗ್ಗದ, ಶಾಂತಾಬಾಯಿ ಮಗ್ಗದ, ಚೆನ್ನಮ್ಮ ಗುಂಡಕರ್ಜಿ ಇತರರು ಇದ್ದರು.   

ಆರೋಪದಲ್ಲಿ ಹುರುಳಿಲ್ಲ:  ಕಾಮನಕೇರಿ ಗುಡ್ಡಕ್ಕೆ ಹೋಗುವ ರಸ್ತೆ ಅಧಿಕೃತ ವಾಗಿದೆ. ಮೇ 18ರಂದು ಗ್ರಾಮದ ಪುಣ್ಯಾಶ್ರಮದಲ್ಲಿ ನಡೆಯುವ ಕಾರ್ಯ ಕ್ರಮಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಕಾರಣ ರಸ್ತೆಗೆ ಗರಸು  ಹಾಕಲಾ ಗುತ್ತಿದೆ.  ಇದನ್ನು ವಿರೋಧಿ ಸುತ್ತಿರು ವುದು ಸರಿಯಲ್ಲ ಎಂದು ಶಿವಕಾಂತ ಬಾಗೇವಾಡಿ, ಮಲ್ಲನಗೌಡ ಪಾಟೀಲ, ನಾನಾಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.