ADVERTISEMENT

‘ಸಂಚಾರ ದಟ್ಟಣೆ ನಿಯಂತ್ರಣಕ್ಕ ಬೈಪಾಸ್’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 6:58 IST
Last Updated 29 ಏಪ್ರಿಲ್ 2017, 6:58 IST

ಬಸವನಬಾಗೇವಾಡಿ: ಮನಗೂಳಿ-ಬಿಜ್ಜಳ, ಬಾರಖೇಡ-ಬೀಳಗಿ ಈ ಎರಡು ರಾಜ್ಯ ಹೆದ್ದಾರಿ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವುದರಿಂದ ಸಂಚಾರ ದಟ್ಟನೆ ಉಂಟಾಗುತ್ತಿದೆ. ಆದ್ದರಿಂದ ಹೊರಭಾಗದ ಮೂಲಕ ವಾಹನ ಹಾದು ಹೋಗಬೇಕು ಎಂಬ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡ ಲಾಗುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಿಂದ ಇಂಗಳೇಶ್ವರ ರಸ್ತೆ ಮೂಲಕ (ಯಲ್ಲಮ್ಮ ದೇವಸ್ಥಾನ ಹಿಂಭಾಗದಿಂದ) ಮುದ್ದೇ ಬಿಹಾಳ ರಸ್ತೆಗೆ ಸಂಪರ್ಕಕ್ಕಾಗಿ ಆರಂಭ ವಾಗಿರುವ ಕೂಡು ರಸ್ತೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.ಎರಡು ರಾಜ್ಯ ಹೆದ್ದಾರಿ ಪಟ್ಟಣದ ಕಿತ್ತೂರ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ ಹಾಗೂ ಜಾಮೀಯಾ ಮಸೀದಿ ಮೂಲಕ ಹಾದು ಹೋಗುವುದರಿಂದ ರಸ್ತೆ ವಿಸ್ತರಣೆ ಮಾಡಬೇಕಾಗುತ್ತದೆ. ಈಗಾ ಗಲೇ 2005ರಲ್ಲಿಯೇ ಪಟ್ಟಣದ ರಸ್ತೆ ವಿಸ್ತರಣೆಗಾಗಿ ರಸ್ತೆಯ ಪಕ್ಕದಲ್ಲಿನ ದೇವ ಸ್ಥಾನ, ಮಸೀದಿ ಸೇರಿದಂತೆ ಸಾರ್ವಜ ನಿಕರ ಆಸ್ತಿ ಅಲ್ಪ ಪ್ರಮಾಣದಲ್ಲಿ ಹೋಗಿ ದ್ದರಿಂದ ಮತ್ತೆ ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಿದರೆ ಇನ್ನಷ್ಟು ಆಸ್ತಿ ಪಾಸ್ತಿ ಹೋಗುವ ಸಾಧ್ಯತೆ ಇದೆ. ಇದನ್ನು ತಪ್ಪಿ ಸಲು ಹಾಗೂ ವಾಹನ ದಟ್ಟನೆ ತಪ್ಪಿಸುವ ಉದ್ದೇಶದಿಂದ ಅನೇಕ ಕಡೆ ಕೂಡು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಮನಗೂಳಿ–ಬಿಜ್ಜಳ ರಾಜ್ಯ ಹೆದ್ದಾರಿ ವಿಜಯಪುರ ರಸ್ತೆ ಮಾರ್ಗದಿಂದ ಪಟ್ಟಣದ ಹೃದಯ ಮಾರ್ಗವಾಗಿ ಹಾದು ಹೋಗಲಿದೆ. ಐತಿಹಾಸಿಕ ಬಸವೇಶ್ವರ ದೇವಸ್ಥಾನ ವೀಕ್ಷಣೆಗೆ ಬರುವ ಪ್ರವಾ ಸಿಗರು, ಮಾರುಕಟ್ಟೆಗೆ ಬರುವ ಸ್ಥಳೀಯ ಹಾಗೂ ತಾಲ್ಲೂಕಿನ ಜನರು ತೊಂದರೆ ಅನುಭವಿಸುತ್ತಾರೆ ಎಂಬ ಉದ್ದೇಶದಿಂದ ಪಟ್ಟಣದ ಇಂಗಳೇಶ್ವರ ರಸ್ತೆ ಮಾರ್ಗ ವಾಗಿ ಮುದ್ದೇಬಿಹಾಳ ರಸ್ತೆಗೆ ಕೂಡು ರಸ್ತೆ ನಿರ್ಮಾಣವಾಗುತ್ತಿದೆ. ಬಾರಕೇಡ್‌–ಬೀಳಗಿ ರಾಜ್ಯ ಹೆದ್ದಾರಿ ಮೂಲಕ ಬರುವ ವಾಹನ ಆಲಮಟ್ಟಿ ರಸ್ತೆಯ ಮುಂಭಾಗ ದಿಂದ ನಾಗೂರ ರಸ್ತೆಯ ಮೂಲಕ ತಾಳಿಕೋಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ADVERTISEMENT

ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ, ಉಪಾಧ್ಯಕ್ಷ ಸಂಜೀವ್ ಕಲ್ಯಾಣಿ, ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಸ್.ಪಾಟೀಲ, ಮುಖ್ಯಾಧಿಕಾರಿ ಬಿ.ಎ.ಸೌದಾಗರ, ಎಸ್.ಜಿ.ವಂದಾಲ, ಸಿದ್ದಾರ್ಥ ಕಳ್ಳಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.