ADVERTISEMENT

ಸಾಮೂಹಿಕ ವಿವಾಹ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:12 IST
Last Updated 17 ಏಪ್ರಿಲ್ 2017, 6:12 IST
ನಿಡಗುಂದಿ ಸಮೀಪದ ತಡಲಗಿಯ ರಾಮಾವಧೂತ ಜಾತ್ರೆ ನಿಮಿತ್ತ ನಡೆದ ಸಾಮೂಹಿಕ ವಿವಾಹದಲ್ಲಿ ದಂಪತಿ
ನಿಡಗುಂದಿ ಸಮೀಪದ ತಡಲಗಿಯ ರಾಮಾವಧೂತ ಜಾತ್ರೆ ನಿಮಿತ್ತ ನಡೆದ ಸಾಮೂಹಿಕ ವಿವಾಹದಲ್ಲಿ ದಂಪತಿ   

ನಿಡಗುಂದಿ: ಸರ್ಕಾರ  ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸಾಮೂಹಿಕ ವಿವಾಹವಾದಾಗ ನೀಡುತ್ತಿರುವ ₹ 50 ಸಾವಿರ ಸಹಾಯಧನ ಇತರ ಹಿಂದುಳಿದ ಜನಾಂಗದವರಿಗೂ ಭವಿಷ್ಯದಲ್ಲಿ ಸಿಗುವಂತಾಗಲಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ಸಮೀಪದ ತಡಲಗಿ ಗ್ರಾಮದ ರಾಮಾವಧೂತ ಜಾತ್ರೆ ಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾತ್ರೆಗಳಲ್ಲಿ ಬರೀ ನಾಟಕ ಪ್ರದರ್ಶನದಿಂದ ಮಾತ್ರ ಸಾಮಾಜಿಕ ಕ್ರಾಂತಿ ಮೊಳಗಿಸಲು ಅಸಾಧ್ಯ. ಅದರ ಜೊತೆಗೆ ಇಂಥ ಸಾಮೂಹಿಕ ವಿವಾಹಗಳನ್ನೂ ಪ್ರತಿಯೊಂದು ಸಮಾಜದ ಸಂಘಟಕರು ಏರ್ಪಡಿಸುವಂತಾಗಬೇಕು ಎಂದರು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ್ ದೇಸಾಯಿ, ಕಾಂಗ್ರೆಸ್ ಧುರೀಣ ತಾನಾಜಿ ನಾಗರಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಾನಂದ ಅಂಗಡಿ ಮಾತನಾಡಿದರು.

ಬೀಳಗಿಯ ಅನ್ನಪೂರ್ಣೇಶ್ವರಿ ಬ್ರಹನ್ಮಠದ ಶಿವಾನಂದ ದೇವರು, ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.ಹಲಗಣಿಯ ಸಂಗಮನಾಥ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ವಿಠ್ಠಲ ಕುಳಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಾಬಾಯಿ ನಾಗರಾಳ, ಶಾಸಕರ ಪತ್ನಿ ಭಾಗ್ಯಶ್ರೀ ಪಾಟೀಲ, ಎಪಿಎಂಸಿ ನಿರ್ದೇಶಕ ಸಿ.ಪಿ. ಪಾಟೀಲ, ತಾಲ್ಲೂಕು ಪಂಚಾಯಿತಿ ಸದಸ್ಯ ಗುರುಸಂಗಪ್ಪ ಯರಂತೇಲಿ, ರಮೇಶ ಇಂಗಳೇಶ್ವರ, ಗುರನಗೌಡ ಬಿರಾದಾರ, ಗಂಗಾರಾಮ ಪವಾರ, ಬಂದೇನವಾಜ ಡೋಲಚಿ, ಗಂಗಾಧರ ಬ್ಯಾಕೋಡ, ಗುರುಸಿದ್ದಪ್ಪ ಕಾಮನಕೇರಿ, ಸಿ.ಎಂ.ಹಂಡಗಿ ಮತ್ತಿತರರು ಇದ್ದರು.

ADVERTISEMENT

ಹಾರ ಬದಲಾಯಿಸಿಕೊಂಡ ಶಾಸಕ ದಂಪತಿ:  ಕಾರ್ಯಕ್ರಮದಲ್ಲಿ  ಶಾಸಕ ಶಿವಾನಂದ ಪಾಟೀಲ, ಪತ್ನಿ ಭಾಗ್ಯಶ್ರೀ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾಬಾಯಿ ಮತ್ತು ಪತಿ ತಾನಾಜಿ ನಾಗರಾಳ ವೇದಿಕೆಯ ಮೇಲೆ ಪರಸ್ಪರ ಹಾರ ಬದಲಾಯಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.