ADVERTISEMENT

‘ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ನೆರವಾಗಿ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 6:59 IST
Last Updated 29 ಏಪ್ರಿಲ್ 2017, 6:59 IST

ವಿಜಯಪುರ: ಪ್ರತಿಯೊಬ್ಬ ನಾಗರಿಕರು ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಮೂಲಕ ಶಾಂತಿಯುತ ಸಮಾಜ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ನೆರವಾಗ ಬೇಕು ಎಂದು ಹಿರಿಯ ಸೆಷನ್ಸ್‌ ನ್ಯಾಯಾ ಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಶ್ರೀನಿವಾಸ ಹೇಳಿದರು.
ನಗರದ ರಾಣಿ ಚೆನ್ನಮ್ಮ ವಿಇ ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಣಿ ಚೆನ್ನಮ್ಮ ವಿ.ವಿ. ಸ್ನಾತಕೋತ್ತರ ಕೇಂದ್ರ, ನೆಹರು ಯುವ ಕೇಂದ್ರ, ಜಿಲ್ಲಾ ಎನ್ಎಸ್‌ಎಸ್‌ ಘಟಕ, ಜಿಲ್ಲಾ ವಕೀಲರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿ ಸಿದ್ದ ನಾಗರಿಕರ ಮೂಲಭೂತ ಕರ್ತವ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕರ ಮೂಲಭೂತ ಕರ್ತವ್ಯ ಪಾಲನೆಗೆ ಸ್ವಇಚ್ಛೆ ಬೇಕು. ದೇಶಪ್ರೇಮ ಬೆಳೆಸುವ ಉದ್ದೇಶದೊಂದಿಗೆ ಮೂಲ ಭೂತ ಕರ್ತವ್ಯಗಳನ್ನು ನಾಗರಿಕರಿಗೆ ದೊರಕಿಸಲಾಗಿದೆ. ಹೀಗಾಗಿ ದೇಶದ ಏಕತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಸೇರಿ ದಂತೆ ಸ್ವಾತಂತ್ರ ಹೋರಾಟಗಾರರ ಆದ ರ್ಶಗಳಿಗೆ ಗೌರವ ನೀಡಬೇಕು. ನೈಸರ್ಗಿಕ ಸಂಪನ್ಮೂಲ, ಜೀವ ಮತ್ತು ಆಸ್ತಿ ರಕ್ಷಣೆ ಸೇರಿದಂತೆ ಅವಶ್ಯಕ ಕರ್ತವ್ಯ ಪರಿಪಾಲಿ ಸುವುದರ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಂ. ಕೊರಬು, ಒಳ್ಳೆಯ ಸಮಾಜ ನಿರ್ಮಾ ಣಕ್ಕೆ ಮೂಲಭೂತ ಕರ್ತವ್ಯ ಪಾಲನೆ ಅತ್ಯವಶ್ಯಕವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಪಡೆಯುವ ಜತೆಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಅಲ್ಲದೇ, ಉಪಯುಕ್ತ ಸೌಲಭ್ಯ ಪಡೆದು ಕೊಂಡು ದೇಶ ಮತ್ತು ಸಮಾಜದ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು. ಒಳ್ಳೆಯ ಸಮಾಜ ನಿರ್ಮಾಣ ಮಾಡುವ ದಿಸೆಯಲ್ಲಿ ಸಂವಿಧಾನ ರಚ ನಾಕಾರರು ಮೂಲಭೂತ ಹಕ್ಕು  ಹಾಗೂ ಕರ್ತವ್ಯ ಅಳವಡಿಸಿದ್ದಾರೆ ಎಂದರು.

ADVERTISEMENT

ಪ್ರಸಕ್ತ ದಿನಮಾನಗಳಲ್ಲಿ ಯುವ ಜನಾಂಗ ಸಂವಿಧಾನದ ಕುರಿತು ಆಳ ವಾದ ಅಧ್ಯಯನ ನಡೆಸುವುದು ಅವಶ್ಯ ವಿದೆ. ಸಾಮಾಜಿಕ ಸಮಾನತೆ, ಸಹೋ ದರತೆ, ಮೈಗೂಡಿಸಿಕೊಳ್ಳಬೇಕು. ವಿವಿಧ ಧರ್ಮ, ಮತ, ಪಂಥ, ಜಾತಿ ಭೇದ–ಭಾವ ಮಾಡದೇ ತಮ್ಮ ಕರ್ತವ್ಯ ನಿಭಾ ಯಿಸಬೇಕು. ಅದರಂತೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರ ನಾಯಕ ರಿಗೆ, ಮಹಿಳೆಯರಿಗೆ ಗೌರವ ನೀಡುವ ಶ್ರೀಮಂತ ಸಂಸ್ಕೃತಿ, ಪರಂಪರೆ ರಕ್ಷಿಸಿ ಮಾನವೀಯ ಮೌಲ್ಯ ಎತ್ತಿ ಹಿಡಿಯ ಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪ್ರೊ.ಎಚ್.ಎಂ.ಸಜ್ಜಾದೆ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇ ಶಕಿ ಡಾ.ಎಸ್.ರಾಧಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಈರಣ್ಣ ಘಾಳಿ ಮಾತ ನಾಡಿದರು. ರಾಣಿ ಚೆನ್ನಮ್ಮ ವಿ.ವಿ. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಭೀಮಪ್ಪ ನಾವಿ ಅಧ್ಯಕ್ಷತೆ ವಹಿಸಿದ್ದರು.ನೆಹರು ಯುವ ಕೇಂದ್ರದ ಬೇಬಿ ದೊಡಮನಿ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾ ಯಕ ನಿರ್ದೇಶಕ ಸುಲೇಮಾನ್ ನದಾಫ್ ಸ್ವಾಗತಿಸಿದರು. ಪ್ರೊ.ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.