ADVERTISEMENT

ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅವಶ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 10:19 IST
Last Updated 10 ನವೆಂಬರ್ 2017, 10:19 IST

ತಾಳಿಕೋಟೆ: ಮುಸ್ಲಿಂ ವೆಲ್ಫೇರ್ ಕಮಿಟಿ ವತಿಯಿಂದ ಪಟ್ಟಣದ 5ನೇ ವಾರ್ಡ್‌ನಲ್ಲಿ ಶ್ರಮದಾನ (ಸ್ವಚ್ಛತಾ) ಕಾರ್ಯಕ್ರಮ ನಡೆಯಿತು. ಜಿಲ್ಲಾ ಯೋಜನಾ ಸಮಿತಿ ಸದಸ್ಯ ಪ್ರಭುಗೌಡ ಮದರಕಲ್, ಪಟ್ಟಣದಲ್ಲಿ ಪುರಸಭೆ ಸ್ವಚ್ಛತೆಯ ಬಗ್ಗೆ ಸಾಕಷ್ಟು ಕ್ರಮ ವಹಿಸಿದ್ದರೂ ನಾಗರಿಕರು ಕೈಜೋಡಿಸದಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಮುಸ್ಲಿಂ ವೆಲ್ಫೇರ್ ಕಮಿಟಿಯಿಂದ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ ಎಂದರು.

ಕಮಿಟಿ ಅಧ್ಯಕ್ಷ ಮಹಿಬೂಬ್ ಚೋರಗಸ್ತಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಪರಿಸರವಿದ್ದರೇ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಹೀಗಾಗಿ ನಾವು ವಾಸಿಸುವ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಎಂದು ಹೇಳಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಅಲ್ಲಾಬಕ್ಷ ನಮಾಜಕಟ್ಟಿ, ಮೋದಿನ್ ನಗಾರ್ಚಿ, ಖಾಜಾಹುಸೇನ್ ಡೋಣಿ, ಶಫೀಕ್ ಮುರಾಳ, ಅಬ್ದುಲ್ ಸತ್ತಾರ ಖಾಂಜಾದೆ, ಸದ್ದಾಮ ನಮಾಜಕಟ್ಟಿ, ಅಲೀ ಚೋರಗಸ್ತಿ, ಅಬ್ದುಲ್ ರಜಾಕ ನಾಲ್ತವಾಡ, ಮುಜಾಹಿದ ನಮಾಜಕಟ್ಟಿ, ಫಯಾಜ ಉತ್ನಾಳ, ಹನೀಫ್ ಜಮಾದಾರ, ಖುತ್ಬುದ್ದಿನ್ ಮೋಮಿನ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.