ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ; ನೀರಿನ ಸಮಸ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:25 IST
Last Updated 16 ಏಪ್ರಿಲ್ 2017, 9:25 IST

ಕೆಂಭಾವಿ: ‘ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪ್ರಾಮಾಣಿ ಕವಾಗಿ ಕೆಲಸ ಮಾಡಿದರೆ ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ’ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಹೇಳಿದರು.ಪಟ್ಟಣದ ಹಿಲ್ ಟಾಪ್ ಕಾಲೋನಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಕೆಂಭಾವಿ ವಲಯದ 11 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು,
‘ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಯಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆ ಈವರೆಗೆ ಯಾರೊಬ್ಬ ರೂ ಸಹ ಈ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ’ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.

‘ಸರ್ಕಾರ ಹಲವಾರು ಯೋಜನೆ ಗಳಡಿ ಗ್ರಾಮ ಪಂಚಾಯತಿಗೆ ನೇರವಾಗಿ ಹಣ ನೀಡುತ್ತಿದೆ. ಆದರೆ ಕಾಮಗಾರಿಗಳು ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳೆ ನೇರ ಹೊಣೆಯಾಗುತ್ತಾರೆ. ಕಿರದಳ್ಳಿ ಗ್ರಾಮದ ಕುಡಿಯುವ ನೀರಿನಲ್ಲಿ ಅರ್ಸೆನಿಕ್ ರಾಸಾಯನಿಕ ಅಂಶವಿದ್ದು, ಇಲ್ಲಿನ ಕೊಳ ವೆಬಾವಿಯ ನೀರನ್ನು ಸೇವಿಸದಂತೆ ಮುನ್ನೆಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

‘ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಪ್ರತಿಯೊಂದು ಗ್ರಾಮದ ಜನತೆಗೆ ಕುಡಿಯುವ ನೀರು ಕೊಡುವುದು ನಮ್ಮನಿಮ್ಮೆಲ್ಲರ ಕರ್ತವ್ಯ. ಈಬಗ್ಗ ಎಚ್ಚರವಹಿಸಿ ಕೆಲಸ ಮಾಡ ಬೇಕು’ ಎಂದು ಅವರು ಸೂಚಿಸಿದರು. ಹಣಮಂತರಾಯ ಮಾನಸುಣಗಿ ಯಾಳಗಿ ಮಾತನಾಡಿ ‘ಈ ತಿಂಗಳಲ್ಲಿ ಇದು ಮೂರನೇ ಸಭೆಯಾಗಿದ್ದು, ಕೇವಲ ಚರ್ಚೆ ನಡೆಸಿದರೆ ಸಮಸ್ಯ ಬಗೆಹರಿ ಯದು, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಸಂತರಾವ ಕುಲಕರ್ಣಿ ಮಾತನಾಡಿ ‘ಇಡೀ ಜಿಲ್ಲೆಯಲ್ಲೇ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಹಲವು ಸಮಸ್ಯೆಗಳಿದ್ದರೂ ಯಾವ ಗ್ರಮ ಪಂಚಾಯತಿಗಳಿಂದಲೂ ಈವರೆಗೆ ವರದಿ ಬಂದಿಲ್ಲ. ಇದು ಆಡಳಿತದ ನಿಷ್ಕಾಳಜಿತನ ತೋರುತ್ತದೆ’ ಎಂದರು.‘ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರವಹಿಸಬೇಕು. ಟಾಸ್ಕ ಫೋರ್ಸ್‌ ಯೋಜನೆಯಡಿ ಜಿಲ್ಲೆಯ ಕುಡಿಯುವ ನೀರಿಗೆ ₹ 4 ಕೋಟಿ ಕರ್ಚು ಮಾಡಲಾಗಿದ್ದು, ಇದೀಗ ಮತ್ತೆ ₹ 1.6 ಕೋಟಿ ಯೋಜನೆ ರೂಪಿಸಲಾಗುತ್ತಿದೆ. ಕೇಂದ್ರದ ಎನ್.ಸಿ.ಆರ್.ಎಫ್ ಯೋಜನೆ ಯಡಿ ಸಾಕಷ್ಟು ಹಣವಿದ್ದು ಪ್ರತಿ ಗ್ರಾಮದ ಕುಡಿಯುವ ನೀರಿನ ಸಮಸ್ಯ ಪರಿಹರಿಸ ಲಾಗುವುದು’ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ನಿವಾ ರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಬಸನಗೌಡ ಹೊಸಮನಿ, ತಾಲ್ಲೂಕು ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ತಾಲ್ಲೂಕು ಪಂಚಾಯಿತಿ ಸದಸ್ಯರು,  ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.