ADVERTISEMENT

ಉಚಿತ ಬಸ್‌ಪಾಸ್ ಬಡ ವಿದ್ಯಾರ್ಥಿಗಳಿಗೂ ವಿಸ್ತರಿಸಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 8:31 IST
Last Updated 15 ಜುಲೈ 2017, 8:31 IST

ಯಾದಗಿರಿ: ‘ಉಚಿತ ಬಸ್‌ಪಾಸ್ ಸೌಲಭ್ಯ ವನ್ನು ಗ್ರಾಮೀಣ ಪ್ರದೇಶದ ಹಿಂದುಳಿದ ಎಲ್ಲಾ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳ ಬೇಕು’ ಎಂದು ಒತ್ತಾಯಿಸಿ ನ್ಯಾಷನಲ್ ಸ್ಟೂಡೆಂಟ್‌ ಯೂನಿಯನ್ ಆಫ್‌ ಇಂಡಿಯಾ, ಸ್ಟೂಡೆಂಟ್‌ ಕಾಂಗ್ರೆಸ್ ವತಿ ಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್‌ಪಾಸ್‌ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಆದರೆ, ಬಡ ವಿದ್ಯಾರ್ಥಿ ಗಳಿಗೂ ಈ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ಬಡ ವಿದ್ಯಾರ್ಥಿಗಳಿಗೂ ಸೌಲಭ್ಯ ವಿಸ್ತರಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಬಿಎಂಟಿಸಿ ಸಾರಿಗೆ ಸಂಸ್ಥೆ ನಾಗರಿಕರಿಗೆ ರಿಯಾಯಿತಿ ದರ ದಲ್ಲಿ ಮಾಸಿಕ ಹಾಗೂ ದೈನಂದಿನ ಬಸ್‌ಪಾಸ್ ವಿತರಿಸುವ ಮಾದರಿಯಲ್ಲಿಯೇ ಯಾದಗಿರಿ ನಗರದ ಘಟಕದಲ್ಲಿ ಬಸ್‌ಪಾಸ್ ವಿತರಣೆಗೆ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಯಾದಗಿರಿ ನಗರ ನಿರಂತರ ಬೆಳೆಯುತ್ತಿದ್ದು, ನಗರದ ಹೊರವಲ ಯದ ಅನೇಕ ಬಡಾವಣೆಗಳಿಗೆ ಬಸ್ ಸೌಲಭ್ಯ ಇಲ್ಲ. ಆದ್ದರಿಂದ ಎಲ್ಲಾ ಬಡಾವಣೆಗಳಿಗೆ ನಗರ ಸಂಚಾರ ಸೌಲಭ್ಯ ಕಲ್ಪಿಸಬೇಕು. ನಗರ ಸಾರಿಗೆ ವ್ಯವಸ್ಥೆ ರಾತ್ರಿ 7.30 ರವರೆಗೆ ಕಲ್ಪಿಸಲಾಗಿದ್ದು, ಈ ಸಮಯವನ್ನು ರಾತ್ರಿ 1.30 ವರೆಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

‘ನಗರದಿಂದ ದೂರದಲ್ಲಿರುವ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬಸ್ ಸೌಲಭ್ಯ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ರೈಲಿನ ವೇಳೆಗೆ ಅನುಗುಣವಾಗಿ ವಿಶೇಷ ಬಸ್‌ಗಳನ್ನು ಸಂಚರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಎನ್‌ಎಸ್‌ಯುಐ ಜಿಲ್ಲಾ ಘಟಕ ಅಧ್ಯಕ್ಷ ಸಂಜಯಕುಮಾರ ಕಾವಲಿ, ದಿನು ರಾಠೋಡ್, ಮಲ್ಲಿಕಾರ್ಜುನ ವರ್ಕನಳ್ಳಿ, ಸೋಮಶೇಖರ್ ಮಸ್ಕನಳ್ಳಿ, ರಜಾಕ್, ಸಾಬರೆಡ್ಡಿ ವರ್ಕನಳ್ಳಿ, ಲಕ್ಷ್ಮಣ ರಾಠೋಡ್, ಮಲ್ಲು ತಳಕ್, ತಣ್ಣಮೀರ್ ಹತ್ತಿಕುಣಿ, ಬಾಲಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.