ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಸುಜ್ಞಾನ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:13 IST
Last Updated 14 ಮೇ 2017, 8:13 IST

ಯಾದಗಿರಿ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಶಹಾಪುರದ ಆದರ್ಶ ವಿದ್ಯಾಲಯದ ಸುಜ್ಞಾನ 625 ಅಂಕಗಳಿಗೆ ಒಟ್ಟು 622 ಅಂಕ ಪಡೆದು ಶೇ 99.52ರಷ್ಟು ಫಲಿ ತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಶಹಾಪುರದ ಭೋರುಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಿಶಾ ಪಾಟೀಲ್ ದ್ವಿತೀಯ ಒಟ್ಟು 615 (ಶೇ 98.4), ಮಗನ್‌ಲಾಲ್ ಚನ್ನಮ್ಮಾಜಿ ಜೈನ್‌ ಶಾಲೆಯ ವಿದ್ಯಾರ್ಥಿ ಬಸವರಾಜ್‌ ತೃತೀಯ 613 (ಶೇ 98) ಫಲಿತಾಂಶ ಗಳಿಸಿದ್ದಾರೆ.

ಟಾಪ್‌ಟೆನ್‌ ಶಾಲೆಗಳು: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಹಾಪುರದ ಎಂಟು ಶಾಲೆಗಳು ಟಾಪ್‌ಟೆನ್‌ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸಿಂಹಪಾಲು ಗಳಿಸಿವೆ. ಉಳಿದ ಒಂದೊಂದು ಸ್ಥಾನಗಳನ್ನು ಯಾದಗಿರಿ, ಸುರಪುರ ತಾಲ್ಲೂಕುಗಳು ಹಂಚಿ ಕೊಂಡಿವೆ. ಅದರಲ್ಲೂ ಯಾದಗಿರಿ ತಾಲ್ಲೂಕಿನ ತೀರಾ ಹಿಂದುಳಿದ ಪ್ರದೇಶ ಖ್ಯಾತಿಯ ಗುರುಮಠಕಲ್‌ನ ಪ್ರಗತಿ ಶಾಲೆ ಸ್ಥಾನಗಿಟ್ಟಿಸಿದ್ದು, ಯಾದಿಗಿರಿ ನಗರದ ಶಿಕ್ಷಣ ಸಂಸ್ಥೆಗಳು ಅಚ್ಚರಿಪಡುವಂತೆ ಮಾಡಿದೆ.

ADVERTISEMENT

ಶಹಾಪುರದ ಡಿಡಿಯು ಶಾಲೆಯ ವಿದ್ಯಾರ್ಥಿನಿ ಶಿವಾನಿ ಮಹೇಂದ್ರಕರ್ 612 (ಶೇ97.92) ಅಂಕ ಪಡೆದಿದ್ದಾಳೆ. ಅದೇ ರೀತಿ ಇದೇ ನಗರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ದರ್ಶನ್‌ 612 (ಶೇ97.92), ಗುರುಮಠಕಲ್ ಪ್ರಗತಿ ಶಾಲೆಯ ಭವಾನಿ 612 (ಶೇ97.92), ಡಿಡಿಯುನ ಆಯಿಷಾ ಸುಲ್ತಾನ 610 (ಶೇ 97.6), ಡಿಡಿಯು ಶಾಲೆಯ ವಿನುತಾ 610 (ಶೇ 97.6), ಗುರುಮಠ ಕಲ್ ಪ್ರಗತಿ ಶಾಲೆಯ ಭವಾನಿ ಭೀಮಪ್ಪ 610 (ಶೇ 97.6), ಸುರಪುರ ಕುಂಬಾರ ಪೇಟೆಯ ಪ್ರೇರಣಾ ಶಾಲೆಯ ವಿದ್ಯಾರ್ಥಿ ಸಫುರ ಅನಾಮ್ 610 (ಶೇ 97.6) ಅಂಕಗಳಿಸಿ ಟಾಪ್‌ಟೆನ್‌ ಪಟ್ಟಿಯಲ್ಲಿ ತಮ್ಮ ಶಾಲೆಯನ್ನು ಗುರುತಿಸಲು ಕಾರಣ ರಾಗಿದ್ದಾರೆ.

ಒಟ್ಟು 9,446 ಉತ್ತೀರ್ಣ: ಈ ವರ್ಷ ದಲ್ಲಿ 42 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 12,622 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 9,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 7,174 ಹುಡುಗರ ಪೈಕಿ 5,219 ಮಂದಿ ಉತ್ತೀರ್ಣರಾಗಿದ್ದಾರೆ. 5,448 ಹುಡುಗಿ ಯರಲ್ಲಿ 4,448 ಮಂದಿ ಉತ್ತೀರ್ಣ ರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಬರೆದ 8,763 ವಿದ್ಯಾರ್ಥಿಗಳಲ್ಲಿ 6,551 ವಿದ್ಯಾರ್ಥಿಗಳು ಉತ್ತೀರ್ಣ ರಾದರೆ, ನಗರದ ಪ್ರದೇಶದಲ್ಲಿ ಪರೀಕ್ಷೆ ಬರೆದ 3,859 ವಿದ್ಯಾರ್ಥಿಗಳಲ್ಲಿ 2,895 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಕೆಂಚೇಗೌಡ ತಿಳಿಸಿದ್ದಾರೆ.

ಮಹಾತ್ಮಗಾಂಧಿ ಶಾಲೆ 98ರಷ್ಟು ಸಾಧನೆ: ಇಲ್ಲಿನ ಮಹಾತ್ಮಗಾಂಧಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98ರಷ್ಟು ಫಲಿತಾಂಶ ಪಡೆಯುವ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ಒಟ್ಟು 130 ವಿದ್ಯಾರ್ಥಿಗಳಲ್ಲಿ 127 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 53 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.