ADVERTISEMENT

ಐತಿಹಾಸಿಕ ಫಾಲನ್ ಕಟ್ಟಡ ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:13 IST
Last Updated 21 ಸೆಪ್ಟೆಂಬರ್ 2017, 6:13 IST
ಸುರಪುರದ ಇತಿಹಾಸ ಪ್ರಸಿದ್ಧ ಫಾಲನ್‌ ಕಟ್ಟಡ
ಸುರಪುರದ ಇತಿಹಾಸ ಪ್ರಸಿದ್ಧ ಫಾಲನ್‌ ಕಟ್ಟಡ   

ಸುರಪುರ:ನಗರದ ಸುಂದರ ತಪ್ಪಲು ಪ್ರದೇಶದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿರುವ ಫಾಲನ್ ಬಂಗಲೆ ಅವಸಾನದ ಅಂಚಿನಲ್ಲಿದೆ. ಹಂಪೆಯ ಕಮಲ ಮಹಲ್‌ ಮಾದರಿಯಲ್ಲಿ ನಿರ್ಮಿಸಲಾಗಿರುವ ಈ ಬಂಗ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಫಾಲನ್‌ ಎಂಬ ಬ್ರಿಟಿಷ್‌ ಅಧಿಕಾರಿ 1854 ರಂದು ಈ ಕಟ್ಟಡ ನಿರ್ಮಿಸಿದ್ದರು. ಬ್ರಿಟಿಷ್‌ ಸರ್ಕಾರದ ಪ್ರತಿನಿಧಿಯಾಗಿದ್ದ ಅವರು ಈ ಕಟ್ಟಡವನ್ನು ತಮ್ಮ ಆಡಳಿತ ಕಚೇರಿಯನ್ನಾಗಿ ಮಾಡಿಕೊಂಡಿದ್ದರು.

ಇದಕ್ಕೆ ಅನತಿ ದೂರದಲ್ಲಿ ಇಂತಹ ಎರಡು ಮೂರು ಕಟ್ಟಡಗಳು ಇವೆ. ಎಲ್ಲವೂ ಶಿಥಿಲಗೊಂಡಿವೆ. ಆಗಿನ ಕಾಲಘಟ್ಟದಲ್ಲಿ ಕಟ್ಟಡಗಳು ಉತ್ತಮ ರೀತಿಯಲ್ಲಿ ಸದ್ಬಳಕೆಯಾಗುತ್ತಿದ್ದವು. ಆದರೆ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇವುಗಳತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು.

ADVERTISEMENT

ಐತಿಹಾಸಿಕ ಪರಂಪರೆಯ ಈ ಭವ್ಯ ಕಟ್ಟಡವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು. ವಸ್ತು ಸಂಗ್ರಹಾಲಯ ಇಲ್ಲವೇ ಗ್ರಂಥಾಲಯವನ್ನಾಗಿ ಈ ಕಟ್ಟಡವನ್ನು ಪರಿವರ್ತಿಸಬೇಕು.
ರಾಜಾ ರಾಮಪ್ಪನಾಯಕ ಜೇಜಿ
ಮಾಜಿ ಸದಸ್ಯ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.