ADVERTISEMENT

ಕಕ್ಕೇರಾ:ಮೇಲ್ದರ್ಜೆಗೇರದ ಅಂಚೆ ಕಚೇರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:33 IST
Last Updated 22 ಜೂನ್ 2017, 7:33 IST

ಕಕ್ಕೇರಾ: ಪಟ್ಟಣದ ಅಂಚೆ ಕಚೇರಿ ಸ್ಥಾಪನೆಗೊಂಡು 50 ವರ್ಷಗಳಾದರೂ ಈವರೆಗೆ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ಅಂಚೆ ಕಚೇರಿಯು 2006ರಲ್ಲಿ ಹಿಂಬಡ್ತಿ ಪಡೆದು 585285 ಪಿನ್ ಕ್ರಮಾಂಕ ಕಳೆದುಕೊಂಡು ಮತ್ತೊಂದು ಗ್ರಾಮದ 585215 ಪಿನ್ ಕ್ರಮಾಂಕದಡಿ ಶಾಖಾ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.

‘ಪಟ್ಟಣದಲ್ಲಿ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿ ದಿನವೂ ಉದ್ಯೋಗಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಆದರೆ ಅವರೆಲ್ಲರೂ ಅಂಚೆ ಕಚೇರಿಯಲ್ಲಿ ಆನ್‌ಲೈನ್‌ ಪೇಮೆಂಟ್ ಮಾಡಲಿಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದೆ. ಪಟ್ಟಣದ ಶಾಖಾ ಅಂಚೆ ಕಚೇರಿಯಲ್ಲಿ ಇವ್ಯಾವ ಸೌಲಭ್ಯಗಳು ಇಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

‘ನಿರುದ್ಯೋಗಿ ಯುವಕರು ಹೆಚ್ಚಿನ ಹಣ ತೆತ್ತು ಅಮೂಲ್ಯವಾದ ಸಮಯದ ಆಭಾವದೊಂದಿಗೆ ಮತ್ತೊಂದು ಊರಿಗೆ ಹೋಗಿ ಪೋಸ್ಟಲ್ ಆರ್ಡರ್ ಹಾಗೂ ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು. ಸಿಬ್ಬಂದಿ ಕೊರತೆಯಿದೆ’ ಎಂದರು.

ADVERTISEMENT

‘ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಟ್ಟಣದಲ್ಲಿರುವ ಶಾಖಾ ಅಂಚೆ ಕಚೇರಿಯನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆ ಗೇರಿಸಬೇಕು. ನಿರುದ್ಯೋಗಿಗಳು ಸ್ಥಳೀಯ ವಾಗಿ ಆನ್‌ಲೈನ್‌ನಲ್ಲಿ ಪಾವತಿ ಮಾಡುವಂತಹ ವ್ಯವಸ್ಥೆಯಾಗಬೇಕು. ಅಂಚೆ ಇಲಾಖೆಯು ಪ್ರತಿಯೊಂದು ಸೌಲಭ್ಯವನ್ನು ಒದಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

* * 

ಹಳೆಯ ಗ್ರಾಮ ಪಂಚಾಯಿತಿ ಕಟ್ಟಡ ಖಾಲಿ ಇರುವ ಕಾರಣ ಅಲ್ಲಿ ಅಂಚೆ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಂಚೆ ಕಚೇರಿ ಮೇಲ್ದರ್ಜೆಗೆ ಸ್ಪಂದನೆ ಸಿಕ್ಕಿಲ್ಲ.
ಸೋಮಣ್ಣನಾಯಕ ಹವಾಲ್ದಾರ
ಅಧ್ಯಕ್ಷ, ಪುರಸಭೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.