ADVERTISEMENT

ಕೃಷ್ಣಾ ನದಿಗೆ 47 ಸಾವಿರ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 7:03 IST
Last Updated 2 ಸೆಪ್ಟೆಂಬರ್ 2017, 7:03 IST

ಹುಣಸಗಿ (ಯಾದಗಿರಿ ಜಿಲ್ಲೆ): ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 47 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಯಿತು.
ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ನಾರಾಯಣಪುರ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

‘ಶುಕ್ರವಾರ ಮಧ್ಯಾಹ್ನದಿಂದ ಜಲಾಶಯದ 8 ಕ್ರಸ್ಟ್‌ಗೇಟ್‌ಗಳಿಂದ 47,700  ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ’ ಎಂದು ನಿಗಮದ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ತಂಬಿದೊರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಲಾಶಯದ ನೀರಿನ ಮಟ್ಟ (ಶುಕ್ರವಾರ ಸಂಜೆ)
ಗರಿಷ್ಠ: 492.252 ಮೀ
ಪ್ರಸ್ತುತ ಸಂಗ್ರಹ: 492.25 ಮೀ (33 ಟಿಎಂಸಿ ಅಡಿ)
ಒಳಹರಿವು: 54,000 ಕ್ಯುಸೆಕ್
ಹೊರಹರಿವು: 47,700 ಕ್ಯುಸೆಕ್
8,100 ಕ್ಯುಸೆಕ್ ಕಾಲುವೆಗಳಿಗೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.