ADVERTISEMENT

ಚಟ್ನಳ್ಳಿ ಕೆರೆ ರಕ್ಷಿಸಲು ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:20 IST
Last Updated 19 ಸೆಪ್ಟೆಂಬರ್ 2017, 6:20 IST

ಯಾದಗಿರಿ: ‘ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 42 ಎಕರೆ ನಿಜಾಮರ ಕಾಲದಿಂದಲೂ ಅಸ್ತಿತ್ವದಲ್ಲಿ ಕರೆಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಚಟ್ನಳ್ಳಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿ ಸೋಮವಾರ ಮುಂದೆ ಪ್ರತಿಭಟನೆ ನಡೆಸಿದರು.

ಚಟ್ನಳ್ಳಿ ಗ್ರಾಮದ ಸರ್ವೇ ನಂಬರ್103,104, ಹಿಸ್ಸಾ 1,2,3 ಮತ್ತು 4ರಲ್ಲಿ ಇರುವ 42 ಎಕರೆ ಕೆರೆಯ ಜಮೀನು ವಶಕ್ಕೆ ತೆಗೆದುಕೊಂಡು ಭೂ ರಹಿತರಿಗೆ ಹಂಚಿಕೆ ಮಾಡಬಾರದು. ರೈತರ ಜೀವನಾಡಿಯಾಗಿರುವ ಕೆರೆಯನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಗ್ರಾಮದ ಕೆರೆಯ ಒಡ್ಡಿನ ಕೆಳಭಾಗದಲ್ಲಿರುವ ಜಮೀನುಗಳಿಗೆ ಕೆರೆಯಿಂದ ಪ್ರತಿವರ್ಷ ಮುಂಗಾರು ಹಂಗಾಮಿಗೆ ನೀರು ಹರಿಸಲಾಗುತ್ತಿತ್ತು. ಸುರಪುರ ದೊರೆಗಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಕರೆಯನ್ನು ವಶಕ್ಕೆ ತೆಗೆದುಕೊಂಡು ಭೂ ರಹಿತರಿಗೆ ಹಂಚಿಕೆ ಮಾಡುವುದರಿಂದ ಇಲ್ಲಿಯ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸುರಪುರ ದೊರೆಗಳಿಂದ 2006 ಕ್ಕೂ ಮೊದಲು ಆಂಧ್ರ ರೈತರಾದ ಸೂರ್ಯಪ್ರಸಾದ ಖರೀದಿ ಸಿದ ನಂತರವೂ ಇದೇ ಪದ್ಧತಿ ಮುಂದು ವರಿದುಕೊಂಡು ಬಂದಿದೆ. ಆದರೆ, ಸೂರ್ಯಪ್ರಸಾದ ಈ ಜಮೀನು ಕೆರೆಯನ್ನು ಸರ್ಕಾರದ ಪರಿಶಿಷ್ಟ ಜಾತಿಗೆ ಮತ್ತು ಪಂಗಡದ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
ಭೀಮರೆಡ್ಡಿ, ನಿಂಗಪ್ಪ, ನಾಗಪ್ಪ, ಮಲ್ಲಪ್ಪ, ಭೀಮರಾಯ, ಭೀಮರೆಡ್ಡಿ, ಸಿದ್ದಲಿಂಗರೆಡ್ಡಿ, ಸಾಬಣ್ಣ, ಹಣಮಂತ, ನಾಗಪ್ಪ, ನಿಂಗಪ್ಪ, ನಾಗಪ್ಪ, ಶರಣ, ಮಾಳಪ್ಪ, ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.