ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ 25 ಜೋಡಿಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:04 IST
Last Updated 24 ಮೇ 2017, 6:04 IST

ಕಕ್ಕೇರಾ: ‘ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವಜೋಡಿಗಳು ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣಬೇಕು. ಪ್ರೀತಿಯಿಂದ ನೋಡಿಕೊಳ್ಳಬೇಕು’ ಎಂದು ಅಧಿಪತಿ ಸೋಮನಾಥ ದೇವಾಲಯದ ಪೂಜ್ಯ ನಂದಣ್ಣಪ್ಪ ಪೂಜಾರಿ ತಿಳಿಸಿದರು.

ಪಟ್ಟಣದ ಯುಕೆಪಿ ಕ್ಯಾಂಪ್‌ನಲ್ಲಿ ಸೋಮನಾಥ ಗದ್ದಿಗಿ ಜಾತ್ರಾ ಹಾಗೂ ವಿವಾಹ ಮಹೋತ್ಸವದ ಪ್ರಯುಕ್ತ ಸೋಮವಾರ ನಡೆದ 25 ಜೋಡಿಗಳ ಉಚಿತ ಸಾಮೂಹಿಕ ಮದುವೆಗಳ ಆರಕ್ಷತೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಿರಿಯರನ್ನು ಗೌರವದಿಂದ ಕಂಡಾಗ ಬದುಕು ಸಾರ್ಥಕವಾಗುತ್ತದೆ. ಎಲ್ಲರೂ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬಾಳ್ವೆ ನಡೆಸಬೇಕು. ವೈಮನಸ್ಸು ಮತ್ತು ದ್ವೇಷಕ್ಕೆ ಆಸ್ಪದ ನೀಡಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಪರಮಯ್ಯಸ್ವಾಮಿ, ಬಸವರಾಜ ಮುತ್ಯಾ ಡೊಳ್ಳಿನ, ಶ್ರೀಶೈಲ ಹಿರೇಮಠ, ಗುಂಡಪ್ಪ ಸೊಲ್ಲಾಪುರ, ಪರಮಣ್ಣ ಪೂಜಾರಿ, ಪರಮಣ್ಣ ತೇರಿನ್, ಬಸಯ್ಯಸ್ವಾಮಿ, ಸಿದ್ದಣ್ಣ ದೇಸಾಯಿ, ಚಂದ್ರು ವಜ್ಜಲ್, ಹಣಮಂತ್ರಾಯಗೌಡ, ಮಹಿಬೂಬ ಸುರಪೂರ, ಲಕ್ಕಪ್ಪ ಮೇಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.