ADVERTISEMENT

ದೇಶದಲ್ಲಿ ಈಡೇರದ ಅಂಬೇಡ್ಕರ್ ಆಶಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 10:11 IST
Last Updated 15 ಏಪ್ರಿಲ್ 2017, 10:11 IST
ಯಾದಗಿರಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 126ನೇ ಜಯಂತಿ ಸಮಾರಂಭದಲ್ಲಿ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಮಾತನಾಡಿದರು
ಯಾದಗಿರಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 126ನೇ ಜಯಂತಿ ಸಮಾರಂಭದಲ್ಲಿ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಮಾತನಾಡಿದರು   

ಯಾದಗಿರಿ: ‘ತಳಮಟ್ಟದ ಜನರ ಬದು ಕಿನ ಸುಧಾರಣೆಗಾಗಿ ಇಡೀ ಜೀವನವನ್ನೇ ಮುಡುಪಾಗಿರಿಸಿ ದೇಶಕ್ಕೆ ಸಂವಿಧಾನದ ಬುನಾದಿ ಹಾಕಿಕೊಟ್ಟ ಮಹಾಮಾನ ವತಾವಾದಿ ಅಂಬೇಡ್ಕರ್ ಅವರ ಆಶಯ ಈ ದೇಶದಲ್ಲಿ ಇನ್ನೂ ಈಡೇರಿಲ್ಲ’ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ವಿಷಾದಿಸಿದರು.ಜಿಲ್ಲಾಡಳಿತ ಭವನದ ಸಭಾಂಗಣ ದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಡಾ.ಬಿ. ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ನಂತರ ಅಂಬೇಡ್ಕರ್ ಸಾಮಾಜಿಕವಾಗಿ ಸೇವೆ ಮಾಡುವ ಧುರೀಣರನ್ನು ಹಾಗೂ ಅಧಿಕಾರಿ ವರ್ಗ ವನ್ನು ಬಲವಾಗಿ ನಂಬಿದ್ದರು. ಆದರೆ, ಧುರೀಣರ ರೂಪದಲ್ಲಿ ಸರ್ಕಾರ ಇದೆ. ಜನರ ಆಸೆ ಆಶೋತ್ತರಗಳಿಗೆ ತಕ್ಕಂತೆ ಅದು ಯೋಜನೆ ರೂಪಿಸುತ್ತಿದೆ. ಸರ್ಕಾ ರದ ಯೋಜನೆ, ಸವಲತ್ತು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಇಂದು ಅಧಿಕಾರಿಗಳಲ್ಲಿ ಪ್ರಾಮಾ ಣಿಕತೆ, ಬದ್ಧತೆ ಕೊರತೆಯಿಂದ ದೇಶದಲ್ಲಿ ಅಂಬೇಡ್ಕರ್ ಅವರ ಆಶಯ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನರ ಸೇವೆ ಮಾಡಲು ಸರ್ಕಾರ ಅಧಿಕಾರಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿದೆ. ಎಲ್ಲಾ ಸೌಲಭ್ಯ ಪಡೆದ ಅಧಿಕಾರಿಗಳು ಜನರ ಬಳಿ ಹೋಗದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಧಿಕಾ ರಿಗಳ ಆಲಸ್ಯ ಮತ್ತು ಬೇಜವಾ ಬ್ದಾರಿ ತನದಿಂದ ದೇಶದ ಸ್ಥಿತಿಗತಿ ಸುಧಾರಿಸಿಲ್ಲ. ಸಂವಿಧಾನ ಕಲ್ಪಿಸಿರುವ ಯಾವುದೇ ಸೌಲಭ್ಯಗಳು ಬಡವರಿಗೆ ದಕ್ಕಿಲ್ಲ’ ಎಂದು ಅಧಿಕಾರಿಗಳನ್ನು ಕುಟುಕಿದರು.

ADVERTISEMENT

‘ಜನರಿಂದ ಆರಿಸಿ  ಬಂದ ಜನಪ್ರತಿನಿ ಧಿಗಳು ಅಧಿಕಾರಿಗಳಿಗೆ ಸಲಾಮು ಹೊಡೆದು ಜನರ ಕೆಲಸ ಮಾಡಿಸು ವಂತಹ ಕಾಲ ಬಂದಿದೆ. ಜನರ ಕೆಲಸ ಮಾಡಿಕೊಡುವಂತೆ ನಾನೇ ಖುದ್ದು ಅಧಿಕಾರಿಗಳಿಗೆ ನಾಲ್ಕೈದು ಬಾರಿ ಕರೆ ಮಾಡಬೇಕಾದ ಸ್ಥಿತಿಯಿದೆ. ಇಂಥ ಪರಿ ಸ್ಥಿತಿಯಲ್ಲಿ ಸಂವಿ ಧಾನದ ಯಾವುದೇ ಆಶೋತ್ತರ ಗಳನ್ನು ಸಮಾಜದಲ್ಲಿ ಅನುಷ್ಠಾನ ಗೊಳಿ ಸಲು ಆಗುವುದಿಲ್ಲ’ ಎಂದರು.

‘ಐಎಎಸ್ ಅಧಿಕಾರಿ ಎಸ್.ವಿ.ರಂಗ ನಾಥರಂತಹ ಮತ್ತೊಬ್ಬ ಅಧಿಕಾರಿ ಯನ್ನು ನಾನು ಈವರೆಗೂ ಕಂಡಿಲ್ಲ. ಸರ್ಕಾರದ ಕೆಲಸ ಕಾರ್ಯ ಡೈರಿಯಲ್ಲಿ ಬರೆದಿಟ್ಟುಕೊಂಡು ಸಮಯ, ಸಂದ ರ್ಭಕ್ಕೆ ತಕ್ಕಂತೆ ಕಾರ್ಯನಿರ್ವ ಹಿಸುತ್ತಿದ್ದ ಪರಿ ಇತರರಿಗೆ ಮಾದರಿ ಆಗಿತ್ತು. ಆದ್ದ ರಿಂದ ಅವರ ಸೇವೆಯನ್ನು ಸರ್ಕಾರ ಎರಡು ವರ್ಷ ವಿಸ್ತರಿಸಿತು’ ಎಂದು ಶ್ಲಾಘಿಸಿದರು. ‘ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಅಧಿಕಾರಿಗಳಿಗೆ ದೊಡ್ಡ ಜವಾ ಬ್ದಾರಿ ಇರುತ್ತದೆ. ತಾಳ್ಮೆ ಮತ್ತು ಜಾಣ್ಮೆ ಯಿಂದ ಜವಾಬ್ದಾರಿ ನಿಭಾಯಿಸಬೇಕು. ಜನಪ್ರತಿ ನಿಧಿ–ಜನ–ಅಧಿಕಾರಿಗಳ ಮಧ್ಯೆ ಸುಮಧುರ ಬಾಂಧವ್ಯ ಏರ್ಪಡುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರ ಲಿದೆ’ ಎಂದರು.

ಅಂಬೇಡ್ಕರ್ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಗಾಳೆಪ್ಪ ಪೂಜಾರಿ ‘ಅಂಬೇಡ್ಕರ್ ಅವ ರಂತಹ ಮಹಾನ್‌ ಚಿಂತಕ ನಮ್ಮ ದೇಶ ದಲ್ಲಿ ಅಭ್ಯಾಸ ಮಾಡಿದ್ದರು ಎಂಬು ದಾಗಿ ಅಮೆರಿಕ ಹೆಮ್ಮೆ ಪಡುತ್ತಿದೆ. ಆದರೆ, ಭಾರತವು ಅಂಬೇಡ್ಕರ್ ಸಾಧನೆ ಯನ್ನು ಮರೆತಿದೆ’ ಎಂದರು.

‘ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಪ್ರಶಸ್ತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅರ್ಪಿಸುತ್ತಾ, ‘ನಾನೇನೂ ಜಗತ್ತಿಗೆ ಮಹಾನ್‌ ಅರ್ಥಶಾಸ್ತ್ರ ನೀಡಿಲ್ಲ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ಗಳನ್ನು ವಿವರಿಸಿದ್ದೇನೆ ಅಷ್ಟೇ’ ಎಂದು ಹೇಳಿದ್ದರು. ಅಂತಹ ಮಹಾನ್‌ ನಾಯಕನನ್ನು ಕೇವಲ ಮೀಸಲಾತಿಗೆ ಸೀಮಿತಗೊಳಿಸದೇ ಸಮಗ್ರ ನೆಲೆಯಲ್ಲಿ ಗೌರವಿಸಬೇಕಿದೆ’ ಎಂದರು.

‘ನೀರಾವರಿ ತಜ್ಞರೂ ಆಗಿದ್ದ ಅಂಬೇ ಡ್ಕರ್ ಹಿರಾಕುಡ್, ಭಾಕ್ರಾ ನಂಗಲ್ ನಂತಹ ಬೃಹತ್‌ ಜಲಾಶಯ ಗಳನ್ನು ನಿರ್ಮಿಸಿದರು.  ಇದರಿಂದ ಪಶ್ಚಿಮ ಬಂಗಾಳ, ಗುಜರಾತ್ ರಾಜ್ಯ ಗಳು ಸುಭಿಕ್ಷವಾಗಿವೆ. ರೈತರಿಗೆ, ಕಾರ್ಮಿ ಕರಿಗೆ, ಮಹಿಳೆಯರಿಗೆ ಮೂಲಭೂತ ಹಕ್ಕು, ಮೀಸಲಾತಿ ಕಲ್ಪಿಸಿ ಅವರ ಬದುಕು ಹಸನಾಗಲು ಶ್ರಮಿಸಿದ್ದರು. ಅಂಬೇಡ್ಕರ್‌ ಅವರನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಗೌರವಿ ಸಬೇಕು’ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿಗೌಡ ಅನಪುರ, ನಗರಸಭೆ ಪ್ರಭಾರ ಅಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.