ADVERTISEMENT

ಧರ್ಮದೀಕ್ಷಾ ಯಾತ್ರೆಗೆ ಅದ್ದೂರಿ ಸ್ವಾಗತ

ಯಾದಗಿರಿ, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸಕೈಗೊಂಡ ಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:17 IST
Last Updated 18 ಏಪ್ರಿಲ್ 2017, 5:17 IST
ಯಾದಗಿರಿ: ‘ಅನಕ್ಷರತೆ, ಮೂಢ ನಂಬಿಕೆ, ಅಸಮಾನತೆ, ಶೋಷಣೆ, ದೌರ್ಜನ್ಯ ಹೀಗೆ ನಾನಾ ವೈರುಧ್ಯದಿಂದ ನರಳುತ್ತಿದ್ದ ಭಾರತೀಯರಿಗೆ  ಬದುಕಿನ ನೆಲೆ ಒದಗಿಸಿ ಸಮಾನತೆ ಕಲ್ಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್’ ಎಂದು  ನಗರಸಭೆ ಸದಸ್ಯ ಮರೆಪ್ಪ ಚಟ್ಟರ್‌ಕರ್ ಹೇಳಿದರು.
 
ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚನರಣೆ ಅಂಗವಾಗಿ ಸಾಮೂಹಿಕ ಮದುವೆ ಮತ್ತು ಧರ್ಮ ದೀಕ್ಷಾ ಸಮಾರಂಭ ಅಂಗವಾಗಿ ಹಮ್ಮಿ ಕೊಂಡಿದ ಧರ್ಮಯಾತ್ರೆಗೆ ಸೋಮ ವಾರ ನಗರದ್ಲಲಿ ಅದ್ಧೂರಿ ಸ್ವಾಗತ ಕೋರಿದ ನಂತರ  ಮಾತನಾಡಿದರು.
 
‘ಡಾ.ಬಿಆ.ರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜನ್ಮದಿನ ದಂದು ಸಾರಿಪುತ್ರ ಬುದ್ಧವಿಹಾರದ ಬೌದ್ಧಬಿಕ್ಕು ಸಂಘದಿಂದ ಆರಂಭ ಗೊಂಡಿರುವ ಧರ್ಮಯಾತ್ರೆ ಯಾದಗಿರಿ, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸಕೈಗೊಂಡು ಮೇ10 ರಂದು ಬುದ್ಧ ಪೂರ್ಣಿಮೆಯ ದಿನದಂದು ಶಹಾಪುರ ನಗರದಲ್ಲಿ ಸಮಾರೋಪ ಗೊಳ್ಳಲಿದೆ’ ಎಂದರು.
 
‘ಬುದ್ಧ ಮಲಗಿದ ಬೆಟ್ಟದ ಪಾದದಡಿಯ ಧರ್ಮಗಿರಿಯಲ್ಲಿ ಸಾರಿಪುತ್ರ ಬುದ್ಧ ವಿಹಾರದ ಮಹಾಥೋರೋ ಅವರ ಸಂಕಲ್ಪದೊಂದಿಗೆ 1999ರಲ್ಲಿ ಬುದ್ಧ ಪೂರ್ಣಿಮೆ ದಿನದಂದು ಬಿಜಾಂಕುರ ಗೊಂಡು ಲೋಕಾರ್ಪಣೆಗೊಂಡಿತ್ತು.
 
ಸಾರಿಪುತ್ರ ಬುದ್ಧ ವಿಹಾರ ಲೋಕಾರ್ಪಣೆ ಯಾದ ನಂತರ ಪ್ರಥಮವಾಗಿ ತಥಾಗತ ಭಗವಾನ ಗೌತಮಬುದ್ಧ ಮತ್ತು ಡಾ.ಬಿ. ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಸಾಮೂಹಿಕ ಮದುವೆ ಮತ್ತು ಧರ್ಮದೀಕ್ಷಾ ಸಮಾರಂಭ ನಡೆಯಲಿದೆ’ ಎಂದು ಹೇಳಿದರು.
 
‘ಅಂದು ಸುಮಾರು10 ಸಾವಿರಕ್ಕೂ ಹೆಚ್ಚು ಬೌದ್ಧ ಉಪನ್ಯಾಸಕರು, ಅನು ಯಾಯಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದಿಂದ ಬೌದ್ಧ ಬಿಕ್ಕುಗಳು ಆಗಮಿಸಲಿದ್ದಾರೆ. ಭಂತ ಮಹಾನಾಮ ಹಾಗೂ ಬಂತೆ ಮೆತ್ತಪಾಲ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪರಮೇಶ್ವರ ಸೇರಿದಂತೆ ಗಣ್ಯರು ಭಾಗವಹಿಸುವರು’ ಎಂದರು. 
 
ಸಾರಿಪುತ್ರ ಧರ್ಮಗಿರಿಯ ಬಂತೆಜಿಗ ಳಾದ ಮೇತಪಾಲ, ಸಾರಿಪುತ್ರ ಬಂತೆಜಿ ಗಳು ನೇತೃತ್ವ ವಹಿಸಿದ್ದರು. ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ್, ಬಬುರಾವ ಬುತಾಳೆ, ಗೋಪಾಲ ತೆಳಗೇರಿ, ಅಯ್ಯಣ್ಣ ಸುಂಗಲಕರ್, ಕುಪೇಂದ್ರ ವಠಾರ್, ಪರ ಶುರಾಮ ಮೂಷ್ಟೂರ್‌ಕರ್, ಉಮೇಶ ಖಾನಪುರ, ಕೆ.ಶರಣಪ್ಪ, ಮಲ್ಲಿನಾಥ ಸುಂಗಲ ಕರ್, ಶಿವಕುಮಾರ ಗೆಪ್ಪ ನೋರ್, ಸಂತೋಷ್ ಆಶನಾಳ, ಶರಣು ನಾಟೇಕರ್, ಸಾಗರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.