ADVERTISEMENT

ಬಸರಡ್ಡಿ ಅಧ್ಯಕ್ಷ, ಚಂದ್ರಕಲಾ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:26 IST
Last Updated 4 ಮೇ 2016, 11:26 IST

ಯಾದಗಿರಿ: ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ತಾಲ್ಲೂಕಿನ ಕೊಂಕಲ್‌ ಕ್ಷೇತ್ರದ ಬಸರಡ್ಡಿ ಅನಪೂರ ಆಯ್ಕೆಯಾದರು. ಮಂಗಳವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸುರಪುರ ತಾಲ್ಲೂಕಿನ ನಗನೂರು ಕ್ಷೇತ್ರದ ಚಂದ್ರಕಲಾ ಹೊಸಮನಿ ಆಯ್ಕೆಯಾದರು.

ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ನಡೆಯಿತು. ಕಾಂಗ್ರೆಸ್‌ ವರಿಷ್ಠರ ತೀರ್ಮಾನದಂತೆ ಅಧ್ಯಕ್ಷ ಸ್ಥಾನಕ್ಕೆ ಬಸರಡ್ಡಿ ಅನಪೂರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ಹೊಸಮನಿನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಬಸವರಾಜಸ್ವಾಮಿ ಸ್ಥಾವರ ಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಭೀಮನಗೌಡ ಕ್ಯಾತನಾಳ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 3 ಗಂಟೆಗೆ ಸಭಾಂಗಣಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಯಾದ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌, ನಾಮಪತ್ರ ಹಿಂತೆ ಗೆದುಕೊಳ್ಳಲು ಅವಕಾಶ ನೀಡಿ ದರು. ಆದರೆ, ಯಾರೋಬ್ಬರೂ ನಾಮಪತ್ರ ಹಿಂದಕ್ಕೆ ಪಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು.

ಕಾಂಗ್ರೆಸ್ ಅಭ್ಯರ್ಥಿಗಳಾದ ಬಸರಡ್ಡಿ ಅನಪೂರ ಹಾಗೂ ಚಂದ್ರಕಲಾ ಹೊಸಮನಿಅವರಿಗೆ ತಲಾ 13 ಮತಗಳು ಲಭಿಸಿದರೆ, ಬಿಜೆಪಿ ಅಭ್ಯರ್ಥಿಗಳಾದ ಬಸವ ರಾಜ ಸ್ವಾಮಿ ಸ್ಥಾವರಮಠ ಹಾಗೂ ಶಶಿಕಲಾ ಕ್ಯಾತನಾಳ ಅವರಿಗೆ ತಲಾ 11 ಮತಗಳು ಲಭಿಸಿದವು.

ಕೊನೆಗೆ ಅಧ್ಯಕ್ಷರಾಗಿ ಬಸರಡ್ಡಿ ಅನಪೂರ, ಉಪಾಧ್ಯಕ್ಷರಾಗಿ ಚಂದ್ರಕಲಾ ಹೊಸಮನಿ ಆಯ್ಕೆ ಯಾಗಿದ್ದಾರೆ ಎಂದು ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಪ್ರಕಟಿಸಿದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾ ಗಿತ್ತು. ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಬೆಂಬಲಿಗರು, ಪಟಾಕಿ, ಸಿಡಿಸಿ ಅದ್ದೂರಿ ಮೆರವಣಿಗೆ ನಡೆಸಿದರು.

ನಂತರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ತೆರಳಿದ ನೂತನ ಅಧ್ಯಕ್ಷ ಬಸರಡ್ಡಿ ಅನಪೂರ, ಉಪಾಧ್ಯಕ್ಷ ಚಂದ್ರಕಲಾ ಹೊರಮನಿ, ಮುಖಂಡರನ್ನು ಸನ್ಮಾನಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.