ADVERTISEMENT

ಬಾಲ ಕಾರ್ಮಿಕರನ್ನು ನಿಯೋಜಿಸಿದರೆ ಜೈಲುಪಾಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:01 IST
Last Updated 16 ಫೆಬ್ರುವರಿ 2017, 7:01 IST
ಯಾದಗಿರಿ: ‘ಮೆಕ್ಯಾನಿಕ್‌ ಅಂಗಡಿಗಳಲ್ಲಿ, ಗ್ಯಾರೇಜ್‌ಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದರೆ ₹50 ಸಾವಿರ ದಂಡ ಹಾಗೂ ಎರಡು ವರ್ಷ ಕಾರಾ ಗೃಹ ವಾಸ ಅನುಭವಿಸಬೇಕಾಗುತ್ತದೆ’ ಎಂದು ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇ ಶಕ ರಘುವೀರ ಸಿಂಗ್ ಠಾಕೂರ ಎಚ್ಚರಿಸಿದರು.
 
ನಗರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ 3ನೇ ವಾರ್ಷಿಕೋತ್ಸವ ಸಮಾ ರಂಭ ಉದ್ಘಾಟಿಸಿ ಮಾತನಾಡಿದರು.
 
‘ನಗರದಲ್ಲಿ ಬಹಳಷ್ಟು ಮೆಕ್ಯಾನಿಕ್‌ ಅಂಗಡಿಗಳಿಗೆ ಪರವಾನಗಿ ಇಲ್ಲ. ಸರ್ಕಾರದ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೆ ಸಿಗಬೇಕೆಂದರೆ ಅವರಿಗೆ ಪರವಾನಗಿ ಇರಲೇಬೇಕು. ಕಾರ್ಮಿಕ ಇಲಾಖೆ, ಗುಡಿಕೈಗಾರಿಕಾ ಇಲಾಖೆ, ಸಣ್ಣ ಕೈಗಾರಿಕಾ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ.
 
ಅಲ್ಲದೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರದ ಸೌಲಭ್ಯ, ಯೋಜನೆಗಳ ಸದುಪಯೋಗಪಡೆದುಕೊಳ್ಳಲು ಪರ ವಾನಗಿ ಬೇಕಾಗುತ್ತದೆ. ಹಾಗಾಗಿ, ಮೆಕ್ಯಾನಿಕ್‌ ಅಂಗಡಿ ಮಾಲೀಕರು ಮೊದಲು ಪರವಾನಗಿ ಪಡೆದುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
 
ಜಿಲ್ಲಾ ಕೈಗಾರಿಕಾ ಸಹಾಯಕ ಅಧಿಕಾರಿ ರೇಖಾ ಎನ್. ಮ್ಯಾಗೇರಿ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ, ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಚವ್ಹಾಣ, ಉಪಾಧ್ಯಕ್ಷ ಮಕ ಬುಲ್ ಅಹಮ್ಮದ್ ಚೌದರಿ, ಕಾರ್ಯ ದರ್ಶಿ ಮನೋಹರ ವಿಶ್ವಕರ್ಮಾ,  ಸಹಕಾರ್ಯದರ್ಶಿ ಎಸ್.ಕೆ.ಮೆಹಬೂಬು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.