ADVERTISEMENT

ಭೂಮಿ ಯಾರೊಬ್ಬರಿಗೂ ಸೇರಿದ್ದಲ್ಲ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:12 IST
Last Updated 23 ಏಪ್ರಿಲ್ 2017, 9:12 IST

ಸುರಪುರ: ‘ಭೂಮಿ ಯಾರೊಬ್ಬರಿಗೂ ಸೇರಿದ್ದಲ್ಲ. ಅದು ರಾಷ್ಟ್ರೀಯ ಸ್ವತ್ತು. ಅದನ್ನು ಹಾಳು ಮಾಡುವುದು ಅಥವಾ ಕಬಳಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು ಹೇಳಿದರು.ಇಲ್ಲಿನ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಶನಿವಾರ ಹಮ್ಮಿ ಕೊಂಡಿದ್ದ ವಿಶ್ವಭೂಮಿ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನನದಿಂದ ಮರಣದವರೆಗೆ ಆಸರೆ ನೀಡುವ ಭೂಮಿ ನಾವು ಬಯಸಿ ದ್ದನ್ನು ನೀಡುವ ಕಾಮಧೇನು. ಆರೋಗ್ಯಕ್ಕೆ ಬೇಕಾದ ಪೂರಕ ಅಂಶಗ ಳನ್ನು ನೀಡುವ ಶಕ್ತಿ ಮಣ್ಣಿನಲ್ಲಿದೆ. ಭೂಮಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.‘ಮಣ್ಣು ಕೇವಲ ರೈತನಿಗೆ ಸಂಬಂಧಿ ಸಿದ್ದು ಎಂಬ ಭಾವನೆ ತಪ್ಪು. ಗಿಡ, ಮರ, ಸಸ್ಯಗಳ ಬೆಳವಣಿಗೆಗೆ ಮಣ್ಣು ಪೂರಕ ವಾಗಿದೆ. ಹೇರಳ ಖನಿಜ ಸಂಪತ್ತನ್ನು ಹೊಂದಿದೆ. ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಬಳಕೆಯಲ್ಲೂ ಕೂಡಾ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.

‘ಭೂಮಿಯ ಸಂರಕ್ಷಣೆ ಮಾಡಿ ಕೊಳ್ಳದಿದ್ದಲ್ಲಿ ಗಂಡಾಂತರ ದಿನಗಳನ್ನು ನೋಡಬೇಕಾಗುತ್ತದೆ. ಭೂಮಿಯ ಫಲವತ್ತತೆ ಉಳಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಮುಂದಿನ ದಿನಮಾನಗಳಲ್ಲಿ ಪ್ರತಿ ಇಂಚು ಭೂಮಿಗೂ ಪರದಾಡುವ ಪರಿಸ್ಥಿತಿ ಬರಬಹುದು’ ಎಂದು ಎಚ್ಚರಿಸಿದರು.‘ಕೃಷಿ ಭೂಮಿ. ಅರಣ್ಯ ಭೂಮಿ ಮತ್ತು ಮರುಭೂಮಿ ಎಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕೃಷಿ ಭೂಮಿ ರಕ್ಷಣೆ ರೈತನ ಜವಾಬ್ದಾರಿ, ಅರಣ್ಯ ಸಂರಕ್ಷಣೆ ಸರ್ಕಾರ ಕರ್ತವ್ಯ. ಮರುಭೂಮಿ ರಕ್ಷಣೆ ಎಲ್ಲರಿಗೂ ಸೇರಿದೆ’ ಎಂದು ವಿವರಿಸಿದರು.

ADVERTISEMENT

‘ಮೂರು ವಿಭಾಗಗಳ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆ ಹೊರತು ಹಾಳು ಮಾಡುವಂತಿಲ್ಲ. ಒಂದು ವೇಳೆ ಇಂತಹ ಚಟುವಟಿಕೆ ಕಂಡು ಬಂದಲ್ಲಿ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಎಚ್ಚರಿಸಿದರು.ಸಿವಿಲ್ ನ್ಯಾಯಾಧೀಶ ಎಚ್.ಎ. ಸಾತ್ವಿಕ, ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್.ಸಿದ್ರಾಮಪ್ಪ ಮಾತನಾಡಿದರು. ಉಪಾಧ್ಯಕ್ಷ ವಿ.ಎಸ್. ಬೈಚಬಾಳ, ಎಪಿಪಿ ಮಹಾಂತೇಶ ಮಸಳಿ, ಉದಯಸಿಂಗ್, ದೇವಿಂದ್ರಪ್ಪ ಬೇವಿನಕಟ್ಟಿ ವೇದಿಕೆಯಲ್ಲಿದ್ದರು. ವಕೀಲರಾದ ಸಂಗಣ್ಣ ಬಾಕ್ಲಿ, ಶಿವಾನಂದ ಅವಂಟಿ ಭೂ ಸಂರಕ್ಷಣಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ವಕೀಲರಾದ ಜಿ.ಎಸ್. ಪಾಟೀಲ. ರಾಮನಗೌಡ ಸುಬೇದಾರ, ನಿಂಗಣ್ಣ ಚಿಂಚೋಡಿ, ರಮಾನಂದ ಕವಲಿ, ಎಸ್. ವ್ಯಾಸರಾಜ, ಮನೋಹರ ಕುಂಟೋಜಿ, ಮಂಜುನಾಥ ಹುದ್ದಾರ, ನಂದನಗೌಡ ಪಾಟೀಲ, ಎಂ.ಎಂ. ಖಾಜಿ, ಶಾಂತಗೌಡ ಪಾಟೀಲ, ವೆಂಕಟೇಶ ನಾಯಕ, ಮಲ್ಲು ಬೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.