ADVERTISEMENT

ಮಾತೆ ಮಾಣಿಕೇಶ್ವರಿ ದರ್ಶನ

ಯಾನಾಗುಂದಿ ; ಭಕ್ತರ ಸಮ್ಮುಖದಲ್ಲಿ 84ನೇ ವರ್ಷಕ್ಕೆ ಕಾಲಿಟ್ಟ ಅಮ್ಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:06 IST
Last Updated 10 ಜುಲೈ 2017, 10:06 IST

ಸೇಡಂ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮಾಣಿಕ್ಯಗಿರಿಯ ಯಾನಾಗುಂದಿ ಮಾತೆ ಮಾಣಿಕೇಶ್ವರಿ ಅಮ್ಮನವರು ಗುರುಪೂರ್ಣಿಮೆ ದಿನದಂದು ಭಕ್ತರ ಸಮ್ಮುಖದಲ್ಲಿ 83 ವರ್ಷಗಳನ್ನು ಪೂರೈಸಿ 84ನೇ ವರ್ಷಕ್ಕೆ ಕಾಲಿಟ್ಟರು.

ತಮ್ಮ ಜನ್ಮದಿನದ ನಿಮಿತ್ತ ಮಾತೆ ಮಾಣಿಕೇಶ್ವರಿ ಅವರು ಭಕ್ತರಿಗೆ ಗುಹೆಯಿಂದ ಹೊರಬಂದು ದರ್ಶನ ನೀಡಿದರು. ಮಧ್ಯಾಹ್ನ 2.25 ನಿಮಿಷಕ್ಕೆ ಬಂದ ಅಮ್ಮನವರು ಸುಮಾರು 20 ನಿಮಿಷ ಭಕ್ತರಿಗೆ ದರ್ಶನ ನೀಡಿ ಗುಹೆ ಒಳಗೆ ತೆರಳಿದರು. ಅಮ್ಮನವರು ದರ್ಶನ ನೀಡುತ್ತಾರೆ ಎಂಬ ಮಾಹಿತಿಯನ್ನು ಅರಿತ ಭಕ್ತರು ಬೆಳಿಗ್ಗೆ 8ರಿಂದಲೇ ಮಾಣಿಕ್ಯಗಿರಿಯಲ್ಲಿ ಸೇರತೊಡಗಿದರು.

ತಾಲ್ಲೂಕು, ಜಿಲ್ಲೆ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಮಾತೆ ಕಾಣುತ್ತಿದ್ದಂತೆಯೇ ಎದ್ದು ನಿಂತ ಭಕ್ತರು ಜೈಘೋಷ ಹಾಕಿದರು.

ADVERTISEMENT

ಯಾನಾಗುಂದಿಗೆ ಬರಲು ಭಕ್ತರಿಗೆ ಕಲಬುರ್ಗಿ, ಸೇಡಂ, ಆಂಧ್ರಪ್ರದೇಶ, ತೆಲಂಗಾಣ, ಗುರಮಿಠಕಲ್, ಯಾದಗಿರಿ ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಕುಡಿಯುವ ನೀರಿನ  ಸೌಲಭ್ಯ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ, ಪರ್ವತರೆಡ್ಡಿ ಪಾಟೀಲ ನಾಮವಾರ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ಎಳ್ಳಿ, ಜಿ. ರಮೇಶ, ಜಿ. ಜಿ. ಜ್ಞಾನೇಶ್ವರ, ಕರೆಪ್ಪ ಪಿಲ್ಲಿ, ಶಂಕ್ರಣ್ಣ ವಣಿಕ್ಯಾಳ, ಮೌಲಾಲಿ ಆನಪೂರ, ಅಲ್ಲಮಪ್ರಭು ಪಾಟೀಲ, ಭಾಗಣಗೌಡ ಸಂಕನೂರ, ಬಸವರಾಜಪ್ಪ ದರ್ಶನಾಪೂರ, ಡಿ.ಎಸ್ ನಾಮದಾರ, ಹಣಮಂತ ಮಸ್ಕಿ, ಸೂರ್ಯಕಾಂತ ಅವರಾದ, ಬಸವರಾಜ ಮಹಾಗಾಂವ, ಈರಣ್ಣಗೌಡ ಮಲ್ಲಾಬಾದ್, ರುದ್ರುಗೌಡ ಜೇವರ್ಗಿ, ಸಿದ್ರಾಮರೆಡ್ಡಿ, ಅರವಿಂದ ಮಾಸ್ತರ, ಚೆನ್ನಯ್ಯಸ್ವಾಮಿ, ರವಿ ಚಿತ್ತಾಪೂರ, ಮಹಾದೇವ ಗೋಣಿ ಇದ್ದರು.

***

ಮಳೆಯ ಸಿಂಚನ
ಮಾತೆ ಮಾಣಿಕೇಶ್ವರಿ ಅಮ್ಮನವರು ದರ್ಶನ ನೀಡಿದ 30 ನಿಮಿಷಗಳ ನಂತರ ಮಳೆ ಸಿಂಚನವಾಯಿತು. ಇದರಿಂದ ಮುಂಗಾರು ಬೆಳೆ ಗಳಿಗೆ ಬಂದಿದ್ದ ಮಳೆ ಪೂರಕವಾಯಿತು. ಭಕ್ತರಲ್ಲಿ ಸಂತಸ ಮೂಡಿತು.

***

ಸುಮಾರು ವರ್ಷಗಳಿಂದ ಮಾತೆ ಮಾಣಿಕೇಶ್ವರಿ ಅವರ ದರ್ಶನ ಪಡೆಯಲು ಬರುತ್ತೇನೆ. ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಲ್ಲಿಸಬೇಕು ಎಂಬುವುದು ಮಾತೆ ಮಾಣಿಕೇಶ್ವರಿ ಅವರ ಸಂಕಲ್ಪವಾಗಿದೆ.
ಶರಣಪ್ಪ ಎಳ್ಳಿ  ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.