ADVERTISEMENT

ಯಾದಗಿರಿ: ತಿಪ್ಪೆ ಪಾಲಾದ ಪೊಲೀಸ್‌ ಟೋಪಿ!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 8:58 IST
Last Updated 31 ಡಿಸೆಂಬರ್ 2016, 8:58 IST

ಯಾದಗಿರಿ: ಪೊಲೀಸ್ ಎಂದರೆ ಶಿಸ್ತು. ಸಮವಸ್ತ್ರವದ ಜತೆಗೆ ಕೈಯಲ್ಲಿ ಲಾಠಿ, ನೆತ್ತಿಯಲ್ಲಿ ಟೋಪಿ ನೋಡಿದೊಡನೆ ಎಂಥವರಿಗೂ ನಡುಕ ಬರುತ್ತದೆ. ಆದರೆ, ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹಿಂಭಾಗದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್ ಒಬ್ಬರ ಟೋಪಿ ತಿಪ್ಪೆ ಪಾಲಾಗಿರುವುದು ಇಲಾಖೆಯ ಶಿಸ್ತನ್ನು ಪ್ರಶ್ನಿಸುವಂತಿದೆ.

ಕೆಪಿಎಸ್‌–65 ನಂಬರಿನ ಈ ಟೋಪಿ ಯಾವ ಕಾನ್‌ಸ್ಟೆಬಲ್‌ ತಲೆಯ ಮೇಲಿತ್ತೋ ಗೊತ್ತಿಲ್ಲ. ಈಗ ತಿಪ್ಪೆಯ ಪಾಲಾಗಿದೆ ಎಂಬುದಾಗಿ ಟೋಪಿ ನೋಡಿ ದ ಜನಸಾಮಾನ್ಯರು ವ್ಯಂಗ್ಯವಾಡುವಂತಾಗಿದೆ. ಟೋಪಿ ಹಳೆ ಯದಾದೊಡನೆ ಇಲಾಖೆಯ ಸಮವಸ್ತ್ರ ವಿಭಾಗಕ್ಕೆ ಹಿಂದಿರುಗಿಸುವಂತೆ ಪೊಲೀಸ್‌ ನಿಯಮ ಇದೆ. ಆ ನಿಯಮವನ್ನು ಮೀರಿ ಈ ಟೋಪಿ ತಿಪ್ಪೆಯ ಪಾಲಾಗಿದೆ.

ತನಿಖೆ ನಡೆಸಿ ಕ್ರಮ: ಟೋಪಿ ಹಳೆಯದಿರಬೇಕು. ಹಳೆಯದಾದರೂ ಅದನ್ನು ನಿಯಮಬದ್ಧವಾಗಿ ಹಿಂದಿರುಗಿಸಬೇಕು. ಟೋಪಿ ಯಾರದ್ದು ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.