ADVERTISEMENT

ಶಹಾಪುರ ನಗರಸಭೆ ಪೌರಾಯುಕ್ತರಿಂದ ಕಾನೂನು ಉಲ್ಲಂಘನೆ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:50 IST
Last Updated 21 ಏಪ್ರಿಲ್ 2017, 5:50 IST

ಶಹಾಪುರ: ನಗರಸಭೆಯ ಪೌರಾ ಯುಕ್ತರು ಆಡಳಿತಾಧಿಕಾರಿಯ ಗಮನಕ್ಕೆ ತಾರದೆ ಸಾಮಾನ್ಯ ಸಭೆ ನಡೆಸಿ ಕಾನೂನು ಉಲ್ಲಂಘಿಸಿರುವ ಕುರಿತು ಯೋಜನಾ ನಿರ್ದೇಶಕರು (ನಗರಾಭಿವೃದ್ಧಿ ಕೋಶ) ಪಿ.ಎಸ್.ನಂದಿಗಿರಿ ಅವರು ಜಿಲ್ಲಾಧಿಕಾರಿ ಖೂಷ್ಬೂ ಗೋಯೆಲ್ ಚೌದರಿಗೆ ಗೌಪ್ಯ ವರದಿ ಸಲ್ಲಿಸಿದ್ದಾರೆ.
ನಗರಸಭೆಯ ಆಡಳಿತಾಧಿಕಾರಿಯು ತಮ್ಮ ಟಿಪ್ಪಣಿಯಲ್ಲಿ ‘ಚರ್ಚಿಸಿ’ ಎಂದು ಷರಾ ಹಾಕಿದ್ದಾರೆ. ಆದರೂ ಪೌರಾ ಯುಕ್ತರ ವಿರುದ್ಧ ಕ್ರಮ ಜರುಗಿಸದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಜನವರಿ 9ರಂದು ಸಾಮಾನ್ಯಸಭೆ ನಡೆದಿತ್ತು. ಸಭೆಗೆ ಆಡಳಿತಾ ಧಿಕಾರಿ ಯೂ ಆಗಿರುವ ಜಿಲ್ಲಾಧಿಕಾರಿ ಖೂಷ್ಬೂ ಗೋಯೆಲ್ ಚೌದರಿ ಹಾಜರಾ ಗಿರಲಿಲ್ಲ. ಆಗ ಪೌರಾಯುಕ್ತರು ಹಂಗಾಮಿ ಅಧ್ಯಕ್ಷ ರನ್ನು ನೇಮಿಸಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ತೆಗೆದು ಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸದಸ್ಯ ದೊಡ್ಡ ಮಾನಯ್ಯ ಹಾದಿಮನಿ  ‘ಪೌರಾಯುಕ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡು ಆಡಳಿತಾ ಧಿಕಾರಿಯ ಅಧಿಕಾರ ಚಲಾಯಿಸಿದ್ದಾರೆ.

ಸಾಮಾನ್ಯ ಸಭೆ ನಡೆಸಿ 21 ನಿರ್ಣಯ ಗಳನ್ನು ಅಂಗೀಕರಿಸಿದ್ದು ಕಾನೂನು ಬಾಹಿರ’ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿ ದ್ದರು. ಬಳಿಕ  ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರ ಯೋಜನಾ ನಿರ್ದೇಶಕರು, ‘ಆಯುಕ್ತರು ಪುರಸಭೆ ಕಾಯ್ದೆಯನ್ನು ಉಲ್ಲಂಘಿಸಿ ಸಭೆ ನಡೆಸಿದ್ದಾರೆ. ಅಂದು ಕೈಗೊಂಡ ನಿರ್ಣಯಗಳನ್ನು ರದ್ದುಪಡಿಸ ಬಹುದು. 24 ಗಂಟೆಯೊಳಗೆ ಸಮಜಾ ಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸು ಜಾರಿ ಮಾಡಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕ್ರಮ ಕ್ಕಾಗಿ ಜಿಲ್ಲಾಧಿಕಾರಿಗೆ ಕಡತ ರವಾನಿ ಸಿದ್ದಾರೆ. ‘ಕಾನೂನು ರಕ್ಷಣೆಯಲ್ಲಿ ಅಧಿಕಾರಿ ಗಳು ವಿಫಲ ರಾಗಿದ್ದಾರೆ. ಪ್ರಾದೇಶಿಕ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ನೀಡುತ್ತೇನೆ’ ಎಂದು ಬಿಜೆಪಿಯ ಸದಸ್ಯ ವಸಂತ ಸುರಪುರಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.