ADVERTISEMENT

ಸಂಸ್ಕೃತಿ ಉಳಿಸಿದ ಮಠಗಳು: ಕುಪ್ಪಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:16 IST
Last Updated 18 ಏಪ್ರಿಲ್ 2017, 5:16 IST
ಶಹಾಪುರ:  ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ, ಅನಾದಿ ಕಾಲದಿಂದ ಮಠಗಳು ಅವ ರನ್ನು ಗೌರವದಿಂದ ಕಾಣುತ್ತಾ ಬಂದಿವೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾ ಧ್ಯಕ್ಷೆ ನಾಗರತ್ನ ಕುಪ್ಪಿ ಹೇಳಿದರು.
 
ಸೋಮವಾರ ಶಹಾಪುರ ತಾಲ್ಲೂ ಕಿನ ಮಾಚನೂರು ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ  ವಿಶ್ವ ಮಹಿಳಾ ದಿನಾ ಚರಣೆ ಹಾಗೂ 501 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಕುಟುಂಬ ನಿರ್ವಹಣೆ ಜತೆಗೆ ಪರಿಶ್ರಮ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಪೈಪೋಟಿ ನೀಡುತ್ತಿರುವುದು ಬದಲಾವಣೆಯ ಸಂಕೇತ ಎಂದರು.
 
ಆಧುನಿಕತೆ ಪರಿಣಾಮ ಕುಟುಂಬದ ಸದಸ್ಯರಿಗೆ ಮಹಿಳೆಯರಿಗೆ ಗೌರವ ಸಲ್ಲಿಕೆಗೆ ಸಮಯ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕೆಲಸವನ್ನು ಮಠಾಧೀಶರು ಮಾಡುವ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸುತ್ತಿದ್ದಾರೆ ಎಂದು ಹೇಳಿದರು. 
 
ತುಮಕೂರು ಜಿ.ಪಂ ಸದಸ್ಯೆ ಗಿರಿಜಮ್ಮ ಸದಾಶಿವಪ್ಪಗೌಡ ಪಾಟೀಲ ರೋಟ್ನಡಗಿ ಮಾತನಾಡಿ,‘ಮಹಿಳೆಯರು ಬೆಳಿಗ್ಗೆಯಿಂದ ಕಾಯಕ ಆರಂಭಿಸುತ್ತಾರೆ. ಸಮಾರಂಭದಲ್ಲಿ ಮಹಿಳೆಯರಿಗೆ ಉಡಿ ತುಂಬಿರುವುದು ಅವರಿಗೆ ತಂದ ಸೌಭಾಗ್ಯ ಎಂದು ಹೇಳಿದರು.ನಾಡಿನ ಅಭಿವೃದ್ಧಿಗೆ ಮಠಗಳು ತ್ರೀವಿಧ ದಾಸೋಹಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
 
ಹೆಡಗಿಮದ್ರಾದ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತ ಮಲ್ಲಿ ಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ಶಹಾಪುರದ ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಸ್ವಾಮೀಜಿ ಆರ್ಶಿರ್ವಚನ ನೀಡಿದರು. 
 
ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ, ಶಿವರುದ್ರ ಮುನಿ ದೇವರು, ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಭೀಮನ ಗೌಡ ಕ್ಯಾತನಾಳ, ಉಪನ್ಯಾಸಕಿ ಡಾ. ಜ್ಯೋತಿಲತಾ ತಡಿಬಿಡಿಮಠ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮಿದೇವಿ ನಾಗ ರಾಜ ಮಡ್ಡಿ, ಗ್ರಾ.ಪಂ. ಅಧ್ಯಕ್ಷೆ ಉತ್ತಮ ಸಿದ್ದಣ್ಣ ಇದ್ದರು. ಸಮಾರಂಭದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.