ADVERTISEMENT

ಹಾಲುಮತ ಸಂಸ್ಕೃತಿ ವೈಭವ ಜ.12ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 9:20 IST
Last Updated 10 ಜನವರಿ 2017, 9:20 IST
ಸುರಪುರ: ‘ತಾಲ್ಲೂಕಿನ ತಿಂಥಣಿ ಬ್ರಿಜ್ ಕನಕಗುರು ಪೀಠದಲ್ಲಿ ಜ. 12 ರಿಂದ 14ರ ವರೆಗೆ ಹಾಲುಮತ ಸಂಸ್ಕೃತಿ ವೈಭವ ಕನಕ ಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಲಿದೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ನಿಂಗಣ್ಣ ಚಿಂಚೋಡಿ ಹೇಳಿದರು.
 
ನಗರದ ಟೇಲರ್ ಮಂಜಿಲ್‌ದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
 
ಜ.12 ರಂದು ನಡೆಯುವ ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಎಚ್್.ಎಂ. ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಮತ್ತು ಮಧುಮೇಹ ಚಿಕಿತ್ಸೆ ತಪಾಸಣೆ ಏರ್ಪಡಿಸಲಾಗಿದೆ. 
 
ಜ.13 ರಂದು ರಾಷ್ಟ್ರೀಯ ಗೊಂಡ ಸಮಾವೇಶ ಆಯೋಜಿಸಲಾಗಿದೆ. ಕುರುಬ, ಹಾಲುಮತ, ಧನಗರ್ ಮುಂತಾದ ಹೆಸರಿನಿಂದ ಕರೆದುಕೊಳ್ಳುವ ಸಮುದಾಯವು ಗೊಂಡ ಎಂಬ ಹೆಸರಿನಲ್ಲಿಯೂ ದೇಶಾದ್ಯಂತ ಜನಸಂಖ್ಯೆ ಹೊಂದಿದೆ. ಸುಮಾರು 10 ರಾಜ್ಯಗಳ ಗೊಂಡ ಸಮುದಾಯವನ್ನು ಒಂದೆಡೆ ಸೇರಿಸಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಸ್ಥಾನಮಾನಕ್ಕಾಗಿ ಆಗ್ರಹಿಸುವ ಉದ್ದೇಶ ಈ ಸಮಾವೇಶದ್ದಾಗಿದೆ’ ಎಂದರು.
 
‘ಕೇಂದ್ರ ಆರೋಗ್ಯ ಸಚಿವ ಫಗನಸಿಂಗ ಕುಲಸ್ತೆ ಉದ್ಘಾಟಿಸುವರು. ಕೇಂದ್ರ ಕಾರ್ಮಿಕ ಸಚಿವ ಭಂಡಾರು ದತ್ತಾತ್ರೇಯ ಅಧ್ಯಕ್ಷತೆ. ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಜುಯೆಲ್ ಓರಾಮ್ ಅವರು ಶುಭ ಸಂದೇಶ ಸ್ಮರಣಿಕೆ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹಾಲುಮತ ಬುಡಕಟ್ಟುಗಳ ಕೃತಿ ಬಿಡುಗಡೆ ಮಾಡುವರು’ ಎಂದು ಮಾಹಿತಿ ನೀಡಿದರು.
 
‘14 ರಂದು ಮಾಜಿ ಸಚಿವ ಎಚ್.ವಿಶ್ವನಾಥ ಅವರಿಗೆ ಹಾಲುಮತ ಭಾಸ್ಕರ ಪ್ರಶಸ್ತಿ, ಗಾಂಧಿವಾದಿ ಮಾಜಿ ಶಾಸಕ ಕೆ. ಮಲ್ಲಪ್ಪ ಅವರಿಗೆ ಕನಕರತ್ನ ಪ್ರಶಸ್ತಿ, ಪ್ರೊ. ಎಫ್.ದಂಡಿನ್ ಅವರಿಗೆ ಸಿದ್ದಶ್ರೀ ಪ್ರಶಸ್ತಿ ಮತ್ತು ನಾಗಲಾಂಬಿಕಾದೇವಿಗೆ ಅಹಲ್ಯಾಬಾಯಿ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
 
‘ಎತ್ತುಗಳ ಭಾರ ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರತಿ ದಿನ ರಕ್ತದಾನ ಶಿಬಿರದಲ್ಲಿ ಸಂಗ್ರಹವಾಗುವ ರಕ್ತದಿಂದ ಸಿದ್ದರಾಮಾನಂದ ಸ್ವಾಮೀಜಿ ತುಲಾಭಾರ ಜರುಗಲಿದೆ. ಸಮಾರಂಭಕ್ಕೆ ಕಾಗಿನೆಲೆ ಪೀಠದ ಸ್ವಾಮೀಜಿಗಳು, ರಾಜ್ಯದ ಸಚಿವರು, ಶಾಸಕರು, ಮಾಜಿ ಶಾಸಕರು, ರಾಜಕೀಯ ಮುಖಂಡರು, ಗಣ್ಯರು, ಸಮಾಜದ ಬಾಂಧವರು ಆಗಮಿಸುತ್ತಿದ್ದಾರೆ’ ಎಂದು ವಿವರಿಸಿದರು.
 
ಕುರುಬ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯಮನಪ್ಪ ಭಪ್ಪರಗಿ, ಪ್ರಧಾನ ಕಾರ್ಯದರ್ಶಿ ರಾವುತರಾಯ ಕಮತಗಿ, ಮುಖಂಡರಾದ ನಂದನಗೌಡ ಪಾಟೀಲ್, ಮಲ್ಲೇಶಿ ಪಾಟೀಲ್ ನಾಗರಾಳ, ಕೃಷ್ಣಾ ಹಾವೀನ್, ಮಲ್ಲನಗೌಡ ದೇವಿಕೇರಿ, ಚನ್ನಪ್ಪ ಎಲಿಗಾರ, ರಘುನಾಥ ಮಲ್ಕಾಪುರೆ, ಮಾಳಪ್ಪ ಚಂದ್ಲಾಪುರ ಸೇರಿದಂತೆ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.