ADVERTISEMENT

ಹಿಂಗಾರು ಹಂಗಾಮಿಗೂ ನೀರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:51 IST
Last Updated 7 ನವೆಂಬರ್ 2017, 9:51 IST

ಹುಣಸಗಿ: ಅವಳಿ ಜಲಾಶಯಗಳು ಭರ್ತಿಯಾಗಿದ್ದು, ಹಿಂಗಾರು ಹಂಗಾಮಿಗೂ ಮಾರ್ಚವರೆಗೆ ನೀರು ಹರಿಸಲಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಹುಣಸಗಿ ಸಮೀಪದ ರಾಜನಕೋಳೂರ ಗ್ರಾಮದಲ್ಲಿ ಸೋಮವಾರ ನಡೆದ ಮನೆ ಮನೆ ಕಾಂಗ್ರೆಸ್‌ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಈ ಭಾಗದ ರೈತರ ಅನುಕೂಲಕ್ಕಾಗಿ ರಾಜನಕೋಳೂರ ಏತ ನೀರಾವರಿ ಯೋಜನೆಗಾಗಿ ಸರ್ವೆ ಹಾಗೂ ಅನುಮೋದನೆ ನೀಡಲಾಗಿದೆ. ಅಲ್ಲದೆ, ಕೆಂಭಾವಿ –ಹುಣಸಗಿ –ರಾಜನಕೋಳೂರ ರಾಜ್ಯ ಹೆದ್ದಾರಿ 155 ರ ಮರು ಡಾಂಬರೀಕರಣ, ರಾಜನಕೋಳೂರ ಗೆದ್ದಲಮರಿ ರಸ್ತೆ ಡಾಂಬರೀಕರಣ ಮಾಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿ ಜನರ ಹಿತ ಕಾಪಾಡಿವ ಕೆಲಸ ಮಾಡಿದೆ ಎಂದು ಹೇಳಿದರು.

ADVERTISEMENT

ಮುಖಂಡ ಸೂಲಪ್ಪ ಕಮತಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜನಕೋಳೂರ ಗ್ರಾಮದ ವಿವಿಧ ಪಕ್ಷಗಳ ಮುಖಂಡರಾದ ಭೀಮನಗೌಡ ಮಾಗನೂರ, ವಿರುಪಣ್ಣಗೌಡ ಗುಳಬಾಳ, ಸಿದ್ದನಗೌಡ ಲಿಂಗದಳ್ಳಿ, ಮಲ್ಲಿಕಾರ್ಜುನ ಗರಡ್ಡಿ, ಶಾಂತಿಲಾಲ್ ರಾಠೋಡ, ಮೌನೇಶ ರಾಠೋಡ, ಚನ್ನಪ್ಪಗೌಡ ದದ್ದಲ, ಸಾಹೇಬಗೌಡ ವಠಾರ ಹಲವು ಕಾರ್ಯಕರ್ತರು  ಕಾಂಗ್ರೆಸ್ ಸೇರಿದರು.

ಮುಖಂಡರಾದ ನಾಗಣ್ಣ ದಂಡಿನ್, ರಾಜಾ ಮುಕ್ಕುಂದ ನಾಯಕ, ವೆಂಕೋಬ ಯಾದವ, ನಿಂಗಣ್ಣ ಬಾದ್ಯಾಪುರ, ಎನ್.ಎಂ.ಬಳಿ, ಗೌಡಪ್ಪಗೌಡ ಹಣಮರಡ್ಡಿ, ಬಸವಂತ್ರಾಯ ಸಾಹುಕಾರ, ದಂಡಪ್ಪಗೌಡ, ನಿಂಗಣ್ಣ ಬೂದಗುಂಪಿ, ಅಡಿವೆಪ್ಪ ಬಂಗಿ, ಆರ್.ಎಂ.ರೇವಡಿ, ಅಮರೇಶ ಕೋಳೂರ, ಮಲ್ಲಣ್ಣ ದೇಸಾಯಿ, ಬಸವರಾಜ ಡಂಬಳ ಇದ್ದರು.
ಅಶೋಕ ಸಾಸನೂರ ಸ್ವಾಗತಿಸಿದರು. ತಿರುಪತಿಗೌಡ ದದ್ದಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.