ADVERTISEMENT

ಕಕ್ಕೇರಾ: ಹೆಸರಿಗಷ್ಟೇ ಪುರಸಭೆ

ಮಹಾಂತೇಶ ಸಿ.ಹೊಗರಿ
Published 19 ಮಾರ್ಚ್ 2022, 2:21 IST
Last Updated 19 ಮಾರ್ಚ್ 2022, 2:21 IST
ಕಕ್ಕೇರಾ ಪುರಸಭೆ ಕಚೇರಿ
ಕಕ್ಕೇರಾ ಪುರಸಭೆ ಕಚೇರಿ   

ಕಕ್ಕೇರಾ: ಕಕ್ಕೇರ ಪಟ್ಟಣವು ಪುರಸಭೆಯಾಗಿ 6 ವರ್ಷಗಳಾದರೂ ವಿವಿಧ ಸಮಸ್ಯೆಗಳಿಂದ ಕೂಡಿದ್ದು, ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಲೇ ಇವೆ. ಹೆಸರಿಗೆ ಮಾತ್ರ ಪುರಸಭೆ. ಅಭಿವೃದ್ದಿ ಮಾತ್ರ ಶೂನ್ಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಕ್ಕೇರಾ ಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಈ ಹಿಂದೆ ಪ್ರತಿ ವಾರ್ಡ್‌ಗೆ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಲು ಕಾಮಗಾರಿ ಆರಂಭವಾಗಿ, ಅಪೂರ್ಣವಾಗದೇ 23 ವಾರ್ಡ್‌ಗಳ ನಾಗರಿಕರ ಶುದ್ಧ ಕುಡಿಯುವ ನೀರು ಕನಸಾಗಿಯೇ ಉಳಿಯಿತು.

ಸುಮಾರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಬಸ್ ನಿಲ್ದಾಣ ಪಾಳುಬಿದ್ದು, ಹಂದಿಗಳ ತಾಣವಾಗಿದ್ದು, ಸಾರ್ವಜನಿಕರಿಗೆ , ಪ್ರಯಾಣಕರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಬಸ್ ನಿಲ್ದಾಣ ವ್ಯವಸ್ಥೆ ಕಲ್ಪಿಸಬೇಕೆಂದು ಬಸವರಾಜ ಕಾರಲಕುಂಟಿ ಮನವಿ ಮಾಡಿದ್ದಾರೆ.

ADVERTISEMENT

ವಿವಿಧ ಸಮುದಾಯವರಿಗೆ ಸ್ಮಶಾನದ ಸಮಸ್ಯೆ ಇದೆ. ಶೀಘ್ರದಲ್ಲಿಯೇ ಈ ಎಲ್ಲ ಸಮಸ್ಯೆಗಳು ಬಗೆಹರಿಯಬೇಕು ಎಂಬುದು ಸಾರ್ವಜನಿಕರ ಹಕ್ಕೊತ್ತಾಯವಾಗಿದೆ.

ಸುಮಾರು 40 ಸಾವಿರಕ್ಕೂ ಹೆಚು ಜನಸಂಖ್ಯೆ ಹೊಂದಿದ ಪಟ್ಟಣವಾಗಿದೆ. 8,9 ಮತ್ತು 10ನೇ ತರಗತಿಗಳಲ್ಲಿ ಒಟ್ಟು 444 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ಶೀಘ್ರವಾಗಿ ಬಾಲಕಿಯರ ಪ್ರೌಢ ಶಾಲೆ ಮಂಜೂರು, ಪ್ರಸ್ತುತ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕೆಂದು ರೈತ ಮುಖಂಡ ಬುಚ್ಚಪ್ಪನಾಯಕ ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ ಖಾಸಗಿ ಪದವಿ ಮಹಾ ವಿದ್ಯಾಲಯಗಳಿದ್ದು, ವಿದ್ಯಾರ್ಥಿಗಳಿಗೆ ಅನಕೂಲ ವಾಗುವಂತೆ ಸರ್ಕಾರಿ ಪದವಿ ಮಹಾ ವಿದ್ಯಾಲಯ ಮಂಜೂರು ಮಾಡುವಂತೆ ರೈತ ಮುಖಂಡ ಚಂದ್ರಶೇಖರ ವಜ್ಜಲ್ ಮನವಿ ಮಾಡಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಸೋಮನಾಥ ಕೆರೆ, ಏಲ್ಲಮ್ಮ ಕರೆ ಅಭಿವೃದ್ದಿಯಾಗಿಲ್ಲ. ರೈತಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ, ನಾಡಕಚೇರಿಗೆ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲ. ಹಲವಾರು ಸಮಸ್ಯೆಗಳಿದ್ದರೂ ಶಾಸಕರು ಕಕ್ಕೇರಾ ಪಟ್ಟಣ ಅಭಿವೃದ್ಧಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಜನರ ಆಕ್ಷೇಪವಾಗಿದೆ.

ಕೆಂಭಾವಿ ಪರಿಸ್ಥಿತಿ ಭಿನ್ನವಾಗಿಲ್ಲ

ಇಲ್ಲಿನ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಇಲ್ಲದೆ ಇರುವುದರಿಂದ ನಿತ್ಯದ ಸಾರ್ವಜನಿಕರ ಕೆಲಸಗಳಿಗೆ ತೀವ್ರ ಹಿನ್ನಡೆ ಆಗುತ್ತಿದೆ ಎಂದು ಜನರು ಅಲವತ್ತುಕೊಳ್ಳುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.