ADVERTISEMENT

ಅನಿಮೇಷನ್‌ ಮತ್ತು ಮಲ್ಟಿಮೀಡಿಯ ಕೋರ್ಸ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಅನಿಮೇಷನ್‌ ಮತ್ತು ಮಲ್ಟಿಮೀಡಿಯ ಕೋರ್ಸ್
ಅನಿಮೇಷನ್‌ ಮತ್ತು ಮಲ್ಟಿಮೀಡಿಯ ಕೋರ್ಸ್   

ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಮೈಸೂರಿನ ‘ಅನಿಫ್ರೇಮ್ಸ್‌ – ಕಾಲೇಜ್‌ ಆಫ್‌ ಆರ್ಟ್ಸ್‌, ಅನಿಮೇಷನ್‌ ಅಂಡ್‌ ಮಲ್ಟೀಮೀಡಿಯ’ದಲ್ಲಿ ಅವಕಾಶಗಳಿವೆ. ಡಿಪ್ಲೊಮೊ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಮುಕ್ತ ಅವಕಾಶವಿದೆ; ಯಾವುದೇ ಪೂರ್ವ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ. ಹದಿನೈದು ವರ್ಷಗಳನ್ನು ಪೂರೈಸಿದ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು. 

ನುರಿತ ಶಿಕ್ಷಕರಿಂದ ತರಬೇತಿಯನ್ನು ನೀಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ತರಗತಿಗಳು ನಡೆಯುತ್ತವೆ. ಅನಿಮೇಷನ್‌ ಪಠ್ಯದ ಜೊತೆಗೆ ಪೇಟಿಂಗ್‌, ಫೋಟೋಗ್ರಫಿ, ಸ್ಕೆಚಿಂಗ್‌, ನಟನೆ, ಇಂಗ್ಲಿಷ್‌ ಸಂಭಾಷಣೆಯ ಬಗ್ಗೆಯೂ ಬೋಧಿಸಲಾಗುತ್ತದೆ.

ಇದುವರೆಗೂ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಯಶಸ್ವಿಯಾಗಿ ತರಬೇತಿಯನ್ನು ಪಡೆದಿದ್ದಾರೆ.

ADVERTISEMENT

ಆಸಕ್ತರು ಸಂಪರ್ಕಿಸಬಹುದಾದ ವಿಳಾಸ: ಅನಿಫ್ರೇಮ್ಸ್‌ – ಕಾಲೇಜ್‌ ಆಫ್‌ ಆರ್ಟ್ಸ್‌ ಅನಿಮೇಷನ್‌ ಅ್ಯಂಡ್‌ ಮಲ್ಟೀಮೀಡಿಯ’, ನಂ. 3, ಎರಡನೇ ಮಹಡಿ (ಕಾರ್ಪೋರೇಷನ್‌ ಬ್ಯಾಂಕ್‌ ಮೇಲೆ), ನ್ಯೂ ಕಾಂತರಾಜ ಅರಸ್‌ ರಸ್ತೆ, ನಿವೇದಿತಾ ನಗರ, ಮೈಸೂರು – 570 022, ದೂರವಾಣಿ: 9008477700. ವೆಬ್‌ಸೈಟ್‌: www.aniframes.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.