ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) ಭಾರತದ ಕೋಗಿಲೆ  ಸರೋಜಿನಿ ನಾಯ್ಡು ಅವರ 138ನೇ ಜನ್ಮದಿನೋತ್ಸವವನ್ನು ಫೆಬ್ರುವರಿ 13ರಂದು  ಆಚರಿಸಲಾಯಿತು. ಅವರ ಬಗೆಗಿನ ಈ ಕೆಳಕಂಡ ಯಾವ ಹೇಳಿಕೆ ಸರಿಯಾಗಿದೆ?
a)  ಭಾರತೀಯ ಮೂಲದ ಮೊದಲ ರಾಷ್ಟ್ರೀಯ  ಕಾಂಗ್ರೆಸ್ ಅಧ್ಯಕ್ಷೆ  
b)  ಮೊದಲ ಮಹಿಳಾ ರಾಜ್ಯಪಾಲರು
c)  ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು     
d) ಮೇಲಿನ ಎಲ್ಲವೂ

2) ದಿ ಅಸೊಶಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಫ್ ಇಂಡಿಯಾ (ಅಸೋಚಾಮ್)ದ ನೂತನ ಅಧ್ಯಕ್ಷರು ಯಾರು?  
a)  ಸಂದೀಪ್ ಜಜೋಡಿಯಾ  
b) ಬಾಲಕೃಷ್ಣ ಗೋಯಂಕಾ
c) ಕಿರಣ್ ಕುಮಾರ್
d) ಸುನೀಲ್‌  ಕನೋರಿಯಾ

3)  ಜರ್ಮನಿ ದೇಶದ ನಿಯೋಜಿತ ಅಧ್ಯಕ್ಷರಾಗಿ ನೇಮಕಗೊಂಡಿರುವ  ಹಿರಿಯ ರಾಜಕಾರಣಿ ಫ್ರಾಂಕ್ ವಾಲ್ಟರ್ ಸ್ಟೇನ್ಮರ್ ಅವರು ಯಾವ  ರಾಜಕೀಯ ಪಕ್ಷಕ್ಕೆ ಸೇರಿದವರು? 
a) CDU (Christian Democratic Union of Germany)       
b) SPD (Social Democratic Party of Germany)
c)  FDP (Free Democratic Party) 
d)  Independent

ADVERTISEMENT

4)  ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗೆ ದಾಖಲಾಗುವ ಮಕ್ಕಳ ವಯೋಮಿತಿ ಎಷ್ಟು ಇರಬೇಕು ಎಂದು ಸೂಚಿಸಿದೆ?
a) 5 ವರ್ಷ  
b) 5 ವರ್ಷ 5 ತಿಂಗಳು 
c) 5 ವರ್ಷ 10 ತಿಂಗಳು 
d) 6 ವರ್ಷ

5) ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕ್ರಿಸ್ಟಲಿನಾ ಜಾರ್ಜಿಯಾ ಅವರು ವಿಶ್ವಬ್ಯಾಂಕ್‌ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇವರು ಯಾವ ದೇಶದವರು? 
a) ಬಲ್ಗೇರಿಯಾ     b) ಅಮೆರಿಕ  
c) ಜರ್ಮನಿ          d) ಇಂಗ್ಲೆಂಡ್

6)  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು ಕಾವೇರಿ ನ್ಯಾಯಾಧೀಕರಣಕ್ಕೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ?
a) ನ್ಯಾ. ಅಭಯ್ ಮನೋಹರ್ ಸಪ್ರೆ        
b) ನ್ಯಾ. ತುಳಸಿದಾಸ್ 
c) ನ್ಯಾ. ರವೀಂದ್ರ ಕೇಳ್ಕರ್
d) ನ್ಯಾ. ನಾರಿಮನ್ 

7)   2016ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ಓ.ಎಲ್. ನಾಗಭೂಷಣಸ್ವಾಮಿ ಅವರಿಗೆ ಸಂದಿದೆ. ಅವರ ಯಾವ ಕೃತಿಗೆ ಬಹುಮಾನ ದೊರೆತಿದೆ?
a) ಸಿಂಗರ್‌ ಕಥೆಗಳು 
b) ವಿಮರ್ಶೆಯ ಪರಿಭಾಷೆ 
c)  ಎ.ಕೆ. ರಾಮಾನುಜನ್ ಅವರ ಆಯ್ದ ಪ್ರಬಂಧಗಳು
d) ನನ್ನ ಹಿಮಾಲಯ

8)  ದೇಶದಲ್ಲಿ ವಿಮಾನ ನಿಲ್ದಾಣ (ಏರ್ ಪೋರ್ಟ್) ಮಾದರಿಯಲ್ಲಿ ಹೆಲಿಕಾಫ್ಟರ್‌ ನಿಲ್ದಾಣ (ಹೆಲಿಪೋರ್ಟ್ )ವನ್ನು  ಮೊಟ್ಟಮೊದಲ ಬಾರಿಗೆ ಎಲ್ಲಿ ನಿರ್ಮಾಣ ಮಾಡಲಾಗಿದೆ?  
a) ಬೆಂಗಳೂರು    b)  ಹೈದರಾಬಾದ್
c) ನವದೆಹಲಿ      d) ಲಖನೌ

9)  ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ, ಜೀವಿಗಳು ವಾಸಿಸಲು ಯೋಗ್ಯವಾಗಿರುವ  7 ಗ್ರಹಗಳನ್ನು ಈ ಕೆಳಕಂಡ ಯಾವ ವಿಜ್ಞಾನಿಗಳು
ಪತ್ತೆಹಚ್ಚಿದ್ದಾರೆ?

a)  ನಾಸಾ ವಿಜ್ಞಾನಿಗಳು  
b)  ಇಸ್ರೊ ವಿಜ್ಞಾನಿಗಳು
c)  ಚೀನಾ ವಿಜ್ಞಾನಿಗಳು   
d)  ರಷ್ಯಾ ವಿಜ್ಞಾನಿಗಳು

10)  ಯುವತಿಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಯಾವ ಯೋಜನೆಯನ್ನು ಜಾರಿಗೆ ತಂದಿದೆ? 
a) ಇಂದಿರಾ ಯೋಜನೆ  
b) ನಿರ್ಭಯಾ ಯೋಜನೆ
c)  ಮದರ್ ತೆರೆಸಾ ಯೋಜನೆ 
d) ತೇಜಸ್ವಿನಿ ಯೋಜನೆ

ಉತ್ತರಗಳು: 1–d, 2–a, 3–b, 4–c, 5–a, 6–a, 7–c, 8–c,  9–a, 10–d

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.