ADVERTISEMENT

ಪ್ರಜಾವಾಣಿ ಕ್ವಿಜ್ 18

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ಪ್ರಜಾವಾಣಿ ಕ್ವಿಜ್ 18
ಪ್ರಜಾವಾಣಿ ಕ್ವಿಜ್ 18   

1. ತಿ. ತಾ. ಶರ್ಮರು ಪತ್ರಕರ್ತರಾಗುವ ಮುನ್ನ ಯಾವ ಕೆಲಸದಲ್ಲಿದ್ದರು?

ಅ) ಶಿಕ್ಷಕ ಆ) ವಕೀಲ

ಇ) ಶಾಸನಶಾಸ್ತ್ರಜ್ಞ ಈ) ನಟ

ADVERTISEMENT

2. ಅಲೆಗ್ಜಾಂಡರನು ನಿಧನನಾದದ್ದು ಎಲ್ಲಿ?

ಅ) ಮಗಧ ಆ) ಪಂಜಾಬ್

ಇ) ರಷ್ಯಾ ಈ) ಬ್ಯಾಬಿಲೋನ್

3. ‘ಕರ್ನಾಟಕ ನಾಟಕ ಪ್ರಪಿತಾಮಹ’ ಎಂದು ತನ್ನನ್ನೇ ಕರೆದುಕೊಂಡವರಾರು?

ಅ) ಕೈಲಾಸಂ ಆ) ಶ್ರೀರಂಗ

ಇ) ಸಂಸ ಈ) ಜಡಭರತ

4. ‘ಓಡ್ ಆನ್ ಎ ಗ್ರೀಷಿಯನ್ ಅರ್ನ್’ ಪದ್ಯ ಬರೆದ ಆಂಗ್ಲಕವಿ ಯಾರು?

ಅ) ಶೆಲ್ಲಿ ಆ) ಕೀಟ್ಸ್

ಇ) ವರ್ಡ್ಸ್‌ ವರ್ತ್‌ ಈ) ಅಲೆಗ್ಜಾಂಡರ್ ಪೋಪ್

5. ‘ವಚನ ಪಿತಾಮಹ’ ಎಂಬ ಬಿರುದು ಯಾರಿಗೆ ಇದೆ?

ಅ) ಬಸವಣ್ಣ ಆ) ಎಂ.ಎಂ. ಕಲಬುರ್ಗಿ

ಇ) ಅಲ್ಲಮಪ್ರಭು ಈ) ಫ. ಗು. ಹಳಕಟ್ಟಿ

6. ಅಮೆರಿಕದ ಮೊದಲ ರಾಷ್ಟ್ರಾಧ್ಯಕ್ಷ ಯಾರು?

ಅ) ಅಬ್ರಹಾಂ ಲಿಂಕನ್

ಆ) ಥಾಮಸ್ ಜೆಫರ್ಸನ್

ಇ) ಜಾರ್ಜ್ ವಾಷಿಂಗ್ಟನ್

ಈ) ಜಾರ್ಜ್ ಬುಷ್

7. ಡಿ. ಎನ್. ಎ.ಯಲ್ಲಿ ಕೆಳಗಿನ ಯಾವ ವಸ್ತು ಇಲ್ಲ?

ಅ) ಅಡಿನೈನ್ ಆ) ಗ್ವಾನೈನ್

ಇ) ಸೈಟೊಸೀನ್ ಈ) ಈಥೇನ್

8. ‘ಸ್ಕ್ವೇರ್‍ಕಟ್’ಗಳಿಗಾಗಿ ಪ್ರಸಿದ್ಧರಾದ ಕನ್ನಡಿಗ ಕ್ರಿಕೆಟಿಗ ಯಾರು?

ಅ) ಕಿರ್ಮಾನಿ ಆ) ಜಿ. ಆರ್. ವಿಶ್ವನಾಥ್

ಇ) ಪ್ರಸನ್ನ ಈ) ಚಂದ್ರಶೇಖರ್

9. ಸಿಮೆಂಟನ್ನು ತಯಾರಿಸಲು ಬಳಸುವ ಪ್ರಮುಖ ಮೂಲವಸ್ತು ಯಾವುದು?

ಅ) ಪ್ಲಾಸ್ಟಿಕ್ ಆ) ಸುಣ್ಣ

ಇ) ಕಲ್ಲಿನ ಚೂರು ಈ) ಇದ್ದಿಲು

10. ‘ಬೆಳ್ಳಿಮೋಡ’ ಚಿತ್ರದ ನಿರ್ದೇಶಕರು ಯಾರು?

ಅ) ಬಿ. ಆರ್. ಪಂತುಲು ಆ) ರವೀ

ಇ) ಭಾರ್ಗವ ಈ) ಪುಟ್ಟಣ್ಣ ಕಣಗಾಲ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು:

1. ಶಂಕರ 2. ಜೇನ್ ಆಸ್ಟನ್

3. ಮೂತ್ರಪಿಂಡ 4. ಅರಳಿಮರ

5. ಸರ್ವಜ್ಞ 6. ಎಂ. ಎಸ್. ಸುಬ್ಬುಲಕ್ಷ್ಮಿ

7. ಎಂಟು 8. ಒಡಿಶಾ 9. ಮರಳು

10. ಚಿಕ್ಕದೇವರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.