ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) ಉತ್ತರ ಅಟ್ಲಾಂಟಿಕ್ ಸಾಗರಮಾರ್ಗದಲ್ಲಿ ಕಂಡುಬರುವ ಪ್ರಮುಖ ಬಂದರುಗಳನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ

a) ಲಂಡನ್

b) ಅಮ್‌ಸ್ಟರ್ ಡ್ಯಾಂ

ADVERTISEMENT

c) ಹ್ಯಾಂಬರ್ಗ್

d) ಈ ಮೇಲಿನ ಎಲ್ಲವೂ

2) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?

a) ಆಂಧ್ರಪ್ರದೇಶ-ತೆಲಂಗಾಣ

b) ಕೇರಳ-ತಮಿಳುನಾಡು

c) ತಮಿಳುನಾಡು-ಕರ್ನಾಟಕ

d) ಗೋವಾ-ಕರ್ನಾಟಕ

3) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?

a) ಬೈಸಾಕಿ

b) ಅಂದೀಸ್

c) ಕಾಫಿಯ ಹೂಮಳೆ

d) ಮುಂಗಾರು

4) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?

a) ನಂಜನಗೂಡು

b) ಭದ್ರಾವತಿ

c) ದಾಂಡೇಲಿ

d) ಕುಶಾಲನಗರ

5) ನೀಲ್ ನೈಲ್ ಮತ್ತು ಆಟಬಾರ ಎಂಬ ಎರಡು ನದಿಗಳು ಯಾವ ನದಿಯ ಉಪನದಿಗಳಾಗಿವೆ?

a) ಲಕ್ಸರ್ ನದಿ

b) ನೈಲ್ ನದಿ

c) ಟೈಗ್ರೀಸ್ ನದಿ

d) ರೊಸೆಟ್ಟಾ ನದಿ

6)ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು?

a) ವಾಂಜಿ 

b) ನೆರಿವಾಯಲ್

c) ತಿರುವನಂತಪುರಂ

d) ಕೊಟ್ಟಾಯಂ

7)ಒಂದೇ ಜಾತಿಯ ಸ್ವರಗಳು (ಸಜಾತಿಯ ಅಕ್ಷರಗಳು) ಪರಸ್ಪರ ಪರವಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬರುವುದಕ್ಕೆ ………………….. ಸಂಧಿ ಎಂದು ಕರೆಯುತ್ತಾರೆ?

a) ಸವರ್ಣದೀರ್ಘ ಸಂಧಿ

b) ಗುಣ ಸಂಧಿ

c) ಆದೇಶ ಸಂಧಿ

d) ಆಗಮ ಸಂಧಿ

8)ಹಾಲಿನಲ್ಲಿರುವ ಯಾವ ಅಂಶ ಅದನ್ನು ಮೊಸರಾಗುವಂತೆ ಮಾಡುತ್ತದೆ?

a) ಸಿಟ್ರಿಕ್ ಅಂಶ

b) ಲ್ಯಾಕ್ಟೋಸ್ ಅಂಶ

c) ನೈಟ್ರಿಕ್ ಅಂಶ

d) ಸೋಡಿಯಂ ಅಂಶ

9)ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ?

a) ಚಿಕ್ಕಬಳ್ಳಾಪುರ

b) ಕೋಲಾರ

c) ರಾಮನಗರ

d) ಚಿತ್ರದುರ್ಗ

10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ?

a) ಮೈಸೂರು

b) ಶಿವಮೊಗ್ಗ

c) ಧಾರವಾಡ

d) ಮೇಲಿನ ಎಲ್ಲವೂ

ಉತ್ತರಗಳು 1-d, 2-a, 3-c, 4-b, 5-b, 6-a, 7- a, 8-b, 9-d, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.