ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2017, 19:30 IST
Last Updated 13 ಆಗಸ್ಟ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?

a) ವಯೂರವರ್ಮ b) ಕಾಕುತ್ಸವರ್ಮ

c) ತಿರುಮಲವರ್ಮ d) ವಯೂರಶರ್ಮ

ADVERTISEMENT

2) ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸಂಸದರನ್ನು ಗುರುತಿಸಿ?

a) ಅಮೀತ್ ಶಾ  b) ಸ್ಮುತಿ ಇರಾನಿ

c) ಅಹಮದ್ ಪಟೇಲ್  d) ಮೇಲಿನ ಎಲ್ಲರು

3) ಬಾದಾಮಿ ಚಾಲುಕ್ಯರ ಕಾಲದಲ್ಲಿನ ಶಿಲ್ಪಕಲೆ ಅಥವಾ ವಾಸ್ತುಶಿಲ್ಪ ಪ್ರಕಾರದ ಶೈಲಿ ಯಾವುದು?

a) ವೇಸರ ಶೈಲಿ  b) ದ್ರಾವಿಡ ಶೈಲಿ

c) ವೈಷ್ಣವ ಶೈಲಿ  d) ಶೈವ ಶೈಲಿ

4) ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಾಜ ಒಂದನೇ ಬುಕ್ಕ ಈ ಕೆಳಕಂಡ ಯಾವ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದನು?

a) ಕಾಂಬೋಡಿಯಾ b) ಭೂತಾನ್

c) ಚೀನಾ d) ಶ್ರೀಲಂಕಾ

5) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದ ವರ್ಷವನ್ನು ಗುರುತಿಸಿ?

a) 1951-52  b) 1955-56

c) 1960-61  d) 1961-62

6) ತಾಮ್ರ ಮತ್ತು ಸತು ಲೋಹಗಳನ್ನು ಮಿಶ್ರಣ ಮಾಡಿದರೆ ಯಾವ ಮಿಶ್ರಲೋಹ ಉಂಟಾಗುತ್ತದೆ?

a) ಅಭ್ರಕ b) ಹಿತ್ತಾಳೆ

c) ತಾಮ್ರ  d) ಅಲ್ಯೂಮಿನಿಯಂ

7) ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?

a) ಬೇಸಿಗೆ ಕಾಲ  b) ಮಳೆಗಾಲ

c) ಚಳಿಗಾಲ d) ಮೇಲಿನ ಎಲ್ಲವೂ

8) ಪಂಚವಾರ್ಷಿಕ ಯೋಜನೆಗಳ ಪರಿಕಲ್ಪನೆಯನ್ನು ಯಾವ ದೇಶದಿಂದ ತೆಗೆದುಕೊಳ್ಳಲಾಗಿದೆ?

a) ಅಮೆರಿಕ  b) ಜರ್ಮನಿ

c) ರಷ್ಯಾ d) ಇಂಗ್ಲೆಂಡ್

9) ಕಿಮೋಥೆರಫಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಸಂಬಂಧಿಸಿದರೆ, ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ?

a) ಮೂಳೆಗಳು  b) ಮೂತ್ರಪಿಂಡ

c) ನರವ್ಯೂಹ  d) ಮಾಂಸಖಂಡಗಳು

10) ಲೋಥಾಲ್ ಮತ್ತು ಕಾಲಿಬಂಗನ್ ಸ್ಥಳಗಳು ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿವೆ?

a) ಇವು ಹರಪ್ಪ ಸಂಸ್ಕೃತಿಗೆ ಸೇರಿವೆ b) ಇವು ಪರ್ಶಿಯನ್ ಸಂಸ್ಕೃತಿಗೆ ಸೇರಿವೆ

c) ಇವು ಮರುಭೂಮಿ ಪ್ರದೇಶಗಳು d) ಇವು ಪರ್ವತ ಪ್ರದೇಶಗಳು

ಉತ್ತರಗಳು 1-b, 2-d, 3- a, 4-c, 5-a, 6-b, 7-c, 8-c, 9-b, 10-a

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.