ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) 13ನೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಾದರೆ, ದೇಶದ ಮೊಟ್ಟ ಮೊದಲ ಉಪ ರಾಷ್ಟ್ರಪತಿ ಯಾರು? 
a) ಸರ್ವಪಲ್ಲಿ ರಾಧಾಕೃಷ್ಣನ್‌ b) ವಿ.ವಿ. ಗಿರಿ
c) ಗೋಪಾಲ್ ಸ್ವರೂಪ್ ಪಾಠಕ್ d) ಬಿ.ಡಿ. ಜತ್ತಿ

2) ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತ ಜಾಗತಿಕವಾಗಿ ಆತಂಕ ಸೃಷ್ಟಿಸುತ್ತಿರುವ ದೇಶವೊಂದರ ಮೇಲೆ ವಿಶ್ವಸಂಸ್ಥೆ ಕಠಿಣ ದಿಗ್ಬಂಧನ ವಿಧಿಸುವ ನಿರ್ಣಯ ಕೈಗೊಂಡಿದೆ. ಆ ದೇಶ ಯಾವುದು?
a) ಪಾಕಿಸ್ತಾನ b) ಚೀನಾ
c) ದಕ್ಷಿಣ ಕೊರಿಯಾ d) ಉತ್ತರ ಕೊರಿಯಾ

3) ಕೇರಳದಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಎಜ್ಯುಕೇಶನ್ ಅಂಡ್ ರಿಸರ್ಚ್‌ನ ವಿಜ್ಞಾನಿಗಳು ತೈಲವನ್ನು ಹೀರಿಕೊಳ್ಳುವ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಆ ಸಾಧನದ ಹೆಸರನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? 
a) ಕೇಲೆಟರ್ b) ಗೆಲೇಟರ್ c) ಸಿಲೇಟರ್ d)ಕ್ಯೂರೇಟರ್

ADVERTISEMENT

4) ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2016ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದಕ ದಾಳಿ ನಡೆದಿರುವ ದೇಶ ಯಾವುದು? 
a) ಇರಾಕ್ b) ಅಪ್ಘಾನಿಸ್ತಾನ
c) ಭಾರತ d) ಪಾಕಿಸ್ತಾನ

5) ಗ್ರಾಮೀಣ ಪ್ರದೇಶಗಳ ರಸ್ತೆ ನಿರ್ವಹಣೆಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಯಾವ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ?
a) ರಸ್ತೆ ಆ್ಯಪ್ b) ಆರಂಭ್ ಆ್ಯಪ್
c) ಗ್ರಾಮೀಣ ಆ್ಯಪ್‌ d) ವಾಹನ್‌ ಆ್ಯಪ್

6) ಕಳೆದ ಜುಲೈ ತಿಂಗಳಲ್ಲಿ ನಿಧನರಾದ ವಿಜ್ಞಾನಿ ಯಶ್ ಪಾಲ್ ಅವರು ವಿಜ್ಞಾನದ ಯಾವ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರು?
a) ಬಾಹ್ಯಾಕಾಶ ವಿಜ್ಞಾನ b) ರಸಾಯನ ವಿಜ್ಞಾನ
c) ಜೀವಶಾಸ್ತ್ರ d) ವೈದ್ಯಕೀಯ ವಿಜ್ಞಾನ

7) 2017ರ ನವೆಂಬರ್ ತಿಂಗಳಲ್ಲಿ ಜಾಗತಿಕ ಸೈಬರ್‌ ಸ್ಪೆಸ್‌ (ಜಿಸಿಸಿಎಸ್) ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ. ಹಾಗೆ ಈ  ಸಮ್ಮೇಳನ ಯಾವ ನಗರದಲ್ಲಿ ನಡೆಯಲಿದೆ? 
a) ಭಾರತ– ನವದೆಹಲಿ b) ಅಮೆರಿಕ– ನ್ಯೂಯಾರ್ಕ್
c) ಜಪಾನ್–ಟೋಕಿಯಾ d) ಫ್ರಾನ್ಸ್‌– ಪ್ಯಾರಿಸ್‌

8) ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಕೆಳಕಂಡ ಯಾವ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ?
a) 1950ರ ಜನಪ್ರತಿನಿಧಿ ಕಾಯ್ದೆ
b) 1952ರ ಮತದಾನ ಹಕ್ಕು ಕಾಯ್ದೆ
c) 1954 ಅನಿವಾಸಿ ಭಾರತೀಯರ ಹಕ್ಕು ಕಾಯ್ದೆ
d) ಮೇಲಿನ ಎಲ್ಲ ಕಾಯ್ದೆಗಳಿಗೂ 

9) ಅಮೆರಿಕ ಕಾಂಗ್ರೆಸ್‌ನ(ವೈಟ್‌ಹೌಸ್‌)ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
a) ನಿಯೋಮಿ ರಾವ್ b) ಕ್ಲಾರೆನ್ಸ್ ಥಾಮಸ್
c) ಅನುಪಮಾ ಭಟ್ಟಚಾರ್ಯ d) ನಿಸ್ಸಿ ಥಾಮಸ್

10) ಅಂತರರಾಷ್ಟ್ರೀಯ ಆರ್ಥಿಕ ಸಂಘದ (ಐಇಎ)ಅಧ್ಯಕ್ಷರಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಾಬರ್ಟ್ ಸೊಲೋವ್ b) ಅಮರ್ತ್ಯ ಸೇನ್
c) ಕೌಶಿಕ್ ಬಸು d) ಜೋಸೆಫ್ ಸ್ಟಿಗ್ಲಿಝ್

ಉತ್ತರಗಳು: 1-a, 2-d, 3-b, 4-a, 5-b, 6-a, 7-a, 8-a, 9-a, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.