ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2017, 19:30 IST
Last Updated 1 ಜನವರಿ 2017, 19:30 IST

1) 2017ರ ಡಿಸೆಂಬರ್ ಅಂತ್ಯದ ವೇಳೆಗೆ  ಚಂದ್ರನ ಮೇಲೆ ತನ್ನ ರೋವರ್ ನೌಕೆ ಇಳಿಸಲು ಯೋಜನೆ ರೂಪಿಸಿರುವ ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ಯಾವುದು?
a) ಟೀಂ ಇಂಡಸ್   b) ಟೀಂ ಸೈನ್ಸ್‌
c) ಟೀಂ ಮೂನ್‌ d) ಟೀಂ ಆರ್ಯಭಟ

2)  ರಾಜ್ಯಾದ್ಯಂತ 30 ಸಾವಿರ ಎಕರೆ ಭೂಮಿಯನ್ನು ಪರಿಶಿಷ್ಟ ಕೃಷಿಕಾರ್ಮಿಕರಿಗೆ  ನೀಡಲು ರಾಜ್ಯ ಸರ್ಕಾರ ಯಾವ  ವಿನೂತನ ಯೋಜನೆಯನ್ನು ಪ್ರಕಟಿಸಿದೆ?
a) ಭೂಮಿನೆರವು
b) ಕೃಷಿಮಿತ್ರ
c) ಭೂಮಾಲೀಕ
d) ಭೂದಾನ

3) ಭಾರತದಲ್ಲಿ  ಸುಮಾರು ₹3,600 ಕೋಟಿ ಮೌಲ್ಯದ ಆಗಸ್ಟಾ ವೆಸ್ಟ್‌ಲ್ಯಾಂಡ್‌   ಅವ್ಯವಹಾರ ಪ್ರಕರಣ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ ?   
a) ಯುದ್ಧ ವಿಮಾನ   b) ಹೆಲಿಕಾಫ್ಟರ್‌
c) ಜಲಂತರ್ಗಾಮಿ    d) ಭೂಪಿರಂಗಿ

ADVERTISEMENT

4) ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯನ್ನು  ಕರ್ನಾಟಕದ ಯಾವ ಹಿಂದುಳಿದ ಜಿಲ್ಲೆಯಲ್ಲಿ ಸ್ಥಾಪಿಸಲು  ಕೇಂದ್ರ ಸರ್ಕಾರ ನಿರ್ಧರಿಸಿದೆ. 
a) ಬಳ್ಳಾರಿ  b) ಧಾರವಾಡ
c) ಕೊಪ್ಪಳ  d) ರಾಯಚೂರು

5) ₹1 ಕೋಟಿ ಬಹುಮಾನ  ಒಳಗೊಂಡಿರುವ ‘ಲಕ್ಕಿ ಗ್ರಾಹಕ’, ‘ಡಿಜಿ ಧನ್’  ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು,  ಈ ಯೋಜನೆಗಳು ಯಾವುದಕ್ಕೆ ಸಂಬಂಧಿಸಿವೆ ?
a) ನಗದು ರಹಿತ ವಹಿವಾಟು
b) ಸಾಲ ವಹಿವಾಟು 
c) ನಗದು ವಹಿವಾಟು 
d) ಯಾವುದು ಅಲ್ಲ

6) ಭಾರತೀಯ ಸೇನೆಯ ಪಾಕಿಸ್ತಾನ ವಿರುದ್ಧ 1971ರ ಯುದ್ಧದಲ್ಲಿ ವಿಜಯ ಸಾಧಿಸಿದ ದಿನವಾದ ಡಿಸೆಂಬರ್ 16ನ್ನು  ಪ್ರತಿ ವರ್ಷ  ಯಾವ ದಿನವನ್ನಾಗಿ ಆಚರಿಸಲಾಗುತ್ತದೆ ? 
a) ಸಂಭ್ರಮದಿನ    b) ವಿಜಯದಿವಸ
c)  ಕಾರ್ಗಿಲ್‌ದಿನ    d) ಶಾಂತಿದಿವಸ

7) ಬಂಗಾಳಿ ಸಾಹಿತ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಯಾವ ಹಿರಿಯ ಕವಿಗೆ 2016ರ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ? 
a) ಜೆ. ಗೋಸ್ವಾಮಿ
b) ಶಂಖ ಘೋಷ್‌
c)  ಲೀಲಾ ಮಜೂಂದಾರ್  
d)  ಆಶಾಪೂರ್ಣ ದೇವಿ

8) ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯವು ಇತ್ತೀಚೆಗೆ ಯಾವ ಬಾಲಿವುಡ್‌ ನಟನಿಗೆ  ಗೌರವ ಡಾಕ್ಟರೇಟ್ ಪದವಿ ನೀಡಿದೆ?
a) ಶಾರೂಕ್ ಖಾನ್
b) ಸಲ್ಮಾನ್‌ ಖಾನ್‌
c) ಅಕ್ಷಯ್‌ ಕುಮಾರ್ 
d) ದಿಲೀಪ್ ಕುಮಾರ್‌

9) ದಕ್ಷಿಣ ಭಾರತದಲ್ಲೇ ಮೊದಲನೆಯದಾದ ‘ಕೆನಾಲ್ ಸೋಲಾರ್’  ಸೌರಶಕ್ತಿ ಯೋಜನೆಯು ರಾಜ್ಯದ ಯಾವ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ?
a) ಮಂಗಳೂರು  b) ವಿಜಯಪುರ
c) ಮೈಸೂರು     d) ದಾವಣಗೆರೆ

10)    ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ಆಗಿ  ವಿ. ವಿ. ಆಚಾರ್ಯ ನೇಮಕಗೊಂಡಿದ್ದಾರೆ.  ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಯಾರು ನೇಮಕವಾಗಿದ್ದಾರೆ?
a) ನಜೀಬ್ ಜಂಗ್ 
b) ಅನಿಲ್ ಬೈಜಾಲ್
c) ಎಲ್‌. ವೈ. ಕರುಣಾಕರನ್‌
d) ಡಾ. ರಂಗರಾಜನ್‌

ಉತ್ತರಗಳು: 1-a, 2-c, 3-b, 4-d, 5-a, 6-b, 7-b, 8-a, 9-b, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.