ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

1) 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡ್ (ಬ್ರಿಟನ್) ದೇಶದಲ್ಲಿ ಈ ಕೆಳಕಂಡ ಯಾವ ಪಕ್ಷ ಅಧಿಕಾರ ನಡೆಸುತ್ತಿತ್ತು?
a) ಲೇಬರ್ ಪಕ್ಷ          b) ಕನ್ಸರ್ವೇಟಿವ್ ಪಕ್ಷ
c) ಡೆಮಾಕ್ರಟಿಕ್ ಪಕ್ಷ    d) ರಿಪಬ್ಲಿಕ್ ಪಕ್ಷ

2)  ಭಾರತ ಏಕೀಕರಣ ಸಂದರ್ಭದ ಆರಂಭದಲ್ಲಿ ಯಾವ ಸಂಸ್ಥಾನಗಳ ರಾಜರು ಭಾರತದ ಒಕ್ಕೂಟ ಸೇರಲು ಒಪ್ಪಿರಲಿಲ್ಲ?
a) ಕಾಶ್ಮೀರದ ಅರಸ  b) ಜುನಾಗಢ ರಾಜ
c) ಹೈದರಾಬಾದ್ ಸಂಸ್ಥಾನ
d)  ಮೇಲಿನ ಎಲ್ಲವೂ

3) ಜಾಗತಿಕವಾಗಿ ವಿದೇಶಾಂಗ ನೀತಿಯಲ್ಲಿ ‘ಆಲಿಪ್ತನೀತಿ’ಯನ್ನು ವಿಶ್ವಕ್ಕೆ ಪರಿಚಯಿಸಿದ ದೇಶ ಯಾವುದು?
a) ಜಪಾನ್  b) ಭಾರತ
c) ಚೀನಾ d) ಬ್ರಿಟನ್

4) ವಿಶೇಷ ಸಂದರ್ಭಗಳಲ್ಲಿ ರಾಜ್ಯಗಳ ಆಡಳಿತವನ್ನು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಲು ಸಂವಿಧಾನದ ಯಾವ ಅಧಿನಿಯಮ (ವಿಧಿ) ಅವಕಾಶ ಕಲ್ಪಿಸಿದೆ?
a) 156ನೇ ಅಧಿನಿಯಮ 
b) 256ನೇ ಅಧಿನಿಯಮ
c) 356ನೇ ಅಧಿನಿಯಮ
d) 456ನೇ ಅಧಿನಿಯಮ

5) ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಬಹುಜನ ಸಮಾಜ ಪಕ್ಷ (ಬಿಎಸ್್ಪಿ)………?
a) ಪ್ರಾದೇಶಿಕ ಪಕ್ಷ  
b) ರಾಷ್ಟ್ರೀಯ ಪಕ್ಷ
c) ಅಂತರರಾಷ್ಟ್ರೀಯ ಪಕ್ಷ
d) ಯಾವುದು ಅಲ್ಲ

6) 1977ರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಮುಂದಾಳತ್ವದಲ್ಲಿ ಯಾವ ರಾಷ್ಟ್ರೀಯ ಪಕ್ಷವನ್ನು ಸ್ಥಾಪನೆ ಮಾಡಲಾಯಿತು?
a) ಭಾರತೀಯ ಜನತಾ ಪಕ್ಷ   
b) ಜನ ಸೇವಾ ಪಕ್ಷ
c) ಜನತಾ ಪಕ್ಷ   
d)  ಜನತಾ ದಳ

7) 1980ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷ (ಬಿಜೆಪಿ), 1984ರ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು?
a) 28 ಸ್ಥಾನಗಳು  b) 19 ಸ್ಥಾನಗಳು
c)  10 ಸ್ಥಾನಗಳು d) 2 ಸ್ಥಾನಗಳು

8)  1964ರಲ್ಲಿ ಕಮ್ಯೂನಿಸ್ಟ್ ಪಕ್ಷ ಹೋಳಾಗಿ ಈ ಕೆಳಕಂಡ ಯಾವ ಹೊಸ ಪಕ್ಷಗಳು ಹುಟ್ಟಿಕೊಂಡವು?
a) ಕಮ್ಯೂನಿಸ್ಟ ಪಾರ್ಟಿ ಆಫ್ ಇಂಡಿಯಾb) ಕಮ್ಯೂನಿಸ್ಟ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್)
c) a ಮತ್ತು b  d) b ಮಾತ್ರ

9) 1969ರಲ್ಲಿ ಮಾರ್ಕ್ಸ್ ಮತ್ತು ಲೆನಿನ್ ತತ್ವ ಸಿದ್ಧಾಂತಗಳ ಪ್ರಭಾವದೊಂದಿಗೆ ಭಾರತದಲ್ಲಿ ಸ್ಥಾಪನೆಯಾದ ಹೊಸ ಕಮ್ಯೂನಿಸ್ಟ್ ಪಕ್ಷ ಯಾವುದು?
a) ಸಿಪಿಐ  b) ಸಿಪಿಐ (ಎಂ)
c) ಸಿಪಿಐ( ಎಂಎಲ್)  d) ಸಿಪಿಐ (ಎಲ್)

10) ಬಹುಜನ ಸಮಾಜ ಪಕ್ಷವನ್ನು(ಬಿಎಸ್) ಕಾನ್ಸಿರಾಂ ಸ್ಥಾಪನೆ ಮಾಡಿದರೆ, ತೃಣಮೂಲ ಕಾಂಗ್ರಸ್ ಪಕ್ಷವನ್ನು (ಟಿಎಂಸಿ) ಯಾರು ಸ್ಥಾಪನೆ ಮಾಡಿದರು?
a) ಮಮತಾ ಬ್ಯಾನರ್ಜಿ  b) ಮಾಯಾವತಿ
c) ಬೃಂದಾ ಕಾರಟ್  d) ಕವಿತಾ ಕೃಷ್ಣನ್

ಉತ್ತರಗಳು: 1-a, 2-d, 3-b, 4-c, 5-b, 6-c, 7- d, 8-c, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.