ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST

1. ಇತ್ತೀಚೆಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಸ್ಮರಣಿಕೆ ಮತ್ತು ಏಳು ಲಕ್ಷ  ರೂಪಾಯಿ ನಗದು ಬಹುಮಾನ ಒಳಗೊಂಡಿರುವ ಈ ಪ್ರಶಸ್ತಿಯನ್ನು ಯಾವ ಸಂಸ್ಥೆ ನೀಡುತ್ತದೆ?
a) ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ    
b) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
c) ಈಶಾನ್ಯ ಸಾರಿಗೆ ಸಂಸ್ಥೆ     
d) ವಾಯವ್ಯ ಸಾರಿಗೆ ಸಂಸ್ಥೆ

2. ಈ ಕೆಳಕಂಡ ಯಾವ ದೇಶಗಳ ಗಡಿಯಲ್ಲಿ ಗೋಡೆ ನಿರ್ಮಾಣ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದ್ದಾರೆ. 
a)ಅಮೆರಿಕ– ಮೆಕ್ಸಿಕೊ
b) ಅಮೆರಿಕ–ಪೆರುಗ್ವೆ
c) ಕ್ಯೂಬಾ– ಅಮೆರಿಕ
d) ಅಮೆರಿಕ–ಕೆನಾಡ

3. ದೇಶದ ಅತ್ಯುನ್ನತ ಸೇನಾಪ್ರಶಸ್ತಿ ‘ಅಶೋಕ ಚಕ್ರ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಈ ವರ್ಷ (2017) ಯಾವ ಹುತಾತ್ಮ ಯೋಧನಿಗೆ ನೀಡಲಾಗಿದೆ? 
a) ಸುಹಾಸ್ ಬಿಸ್ವಾಸ್         
b) ಹನುಮಂತಪ್ಪ
c) ಸಂದೀಪ್‌ ಶೆಟ್ಟಿ     
d) ಹವಾಲ್ದಾರ್‌ ಹಂಗ್‌ಪಾನ್‌ ದಾದಾ

4. ರಾಷ್ಟ್ರೀಯ ಭೂವಿಜ್ಞಾನ ಸಂಶೋಧನಾ ಸಂಸ್ಥೆ ನೀಡುವ 2016ನೇ ಸಾಲಿನ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ ಯಾರಿಗೆ ಸಂದಿದೆ?
a) ಮಾದವನ್ ನಾಯರ್ ರಾಜೀವನ್ 
b) ಡಾ. ಟಿ. ಎನ್.  ಪ್ರಕಾಶ್
c) ಕೇಶವ್ ಕೃಷ್ಣ
d) ಅನಂತರಾಮನ್ ಪಿಳೈ

5. ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ನೇಮಕಗೊಂಡಿದ್ದಾರೆ. ಇವರು ಯಾವ ವರ್ಷದ ಐಪಿಎಸ್‌  ಬ್ಯಾಚ್‌ ಅಧಿಕಾರಿ ? 
a)1980ರ ಬ್ಯಾಚ್‌
b)1981ರ ಬ್ಯಾಚ್‌  
c)1982ರ ಬ್ಯಾಚ್‌
d) 1983ರ ಬ್ಯಾಚ್‌

6. ಒಂದು ರಾಜಕೀಯ ಪಕ್ಷಕ್ಕೆ ಒಬ್ಬ ವ್ಯಕ್ತಿ ಎಷ್ಟು ರೂಪಾಯಿಗಳನ್ನು ಮಾತ್ರ  ನಗದು ಮೂಲಕ ದೇಣಿಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ (2017–18) ಬಜೆಟ್‌ನಲ್ಲಿ ಹೇಳಿದೆ.
a) 2000 ಮಾತ್ರ         
b) 5000 ಮಾತ್ರ 
c) 10000 ಮಾತ್ರ 
d) 20000 ಮಾತ್ರ 

7. ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಡೆವಲಪ್‌ಮೆಂಟ್‌  ಬ್ಯಾಂಕ್ ಭಾರತದ ಯಾವ  ರಾಜ್ಯದಲ್ಲಿ ಮೊದಲ  ಶಾಖೆಯನ್ನು ತೆರೆಯಲಿದೆ?
a) ಕರ್ನಾಟಕ 
b) ಗುಜರಾತ್ 
c) ಉತ್ತರ ಪ್ರದೇಶ
d) ಕೇರಳ

8. 1993ರಿಂದ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕ್ಯಾನ್ಸರ್ ದಿನವನ್ನು ಯಾವ ತಿಂಗಳಲ್ಲಿ ಆಚರಿಸಲಾಗುತ್ತದೆ?  
a) ಫೆಬ್ರುವರಿ 01
b) ಫೆಬ್ರುವರಿ 04
c) ಫೆಬ್ರುವರಿ 14
d) ಫೆಬ್ರುವರಿ 28

9. ಇತ್ತೀಚೆಗೆ  ನಿಧನರಾದ ಕರ್ನಲ್ ನಿಜಾಮುದ್ದೀನ್ ಅಲಿಯಾಸ್ ಸೈಫುದ್ದೀನ್ ಅವರು ಈ ಕೆಳಕಂಡ ಯಾವ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ಕಾರು ಚಾಲಕರಾಗಿದ್ದರು ?
a) ಮಹಾತ್ಮ ಗಾಂಧಿ 
b) ಜವಾಹರ ಲಾಲ್ ನೆಹರೂ
c) ಸರ್ದಾರ್ ವಲ್ಲಭಬಾಯಿ ಪಟೇಲ್
d) ಸುಭಾಷ್ ಚಂದ್ರ ಬೋಸ್

10. ಫೆಬ್ರುವರಿ 15ರಂದು ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೊ ವಿಶ್ವದಾಖಲೆ ಮಾಡಿತು. ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿದ ರಾಕೆಟ್‌ ಯಾವುದು ?
a) ಜಿಎಸ್‌ಎಲ್‌ವಿ 
b) ಪಿಎಸ್‌ಎಲ್‌ವಿ
c)  ಜಿಎಸ್‌ಎಲ್‌ವಿ–37
d) ಪಿಎಸ್‌ಎಲ್‌ವಿ ಸಿ–37

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.