ADVERTISEMENT

ಪ್ರಜಾವಾಣಿ ಕ್ವಿಜ್ -6

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಪ್ರಜಾವಾಣಿ ಕ್ವಿಜ್ -6
ಪ್ರಜಾವಾಣಿ ಕ್ವಿಜ್ -6   

1. ಸಾಹಿತಿ ಎಂ. ವಿ. ಸೀತಾರಾಮಯ್ಯನವರ ಕಾವ್ಯನಾಮ ಇದು:

ಅ) ಸೀತಾರಾಮು
ಆ) ಎಂ. ವೀ. ಸಿ.
ಇ) ರಾಘವ
ಈ) ವಿ.ಸೀ.

2. ಭಾರತದ ಈಗಿನ ಭೂ ಸೇನಾ ಮುಖ್ಯಸ್ಥರು ಇವರು:

ADVERTISEMENT

ಅ) ಜ. ಬಿಪಿನ್ ರಾವತ್
ಆ) ಲೆ.ಜ. ಅಭಯ ಕ್ರಷ್ಣ
ಇ) ಎಸ್.ಪಿ. ವೇದ್
ಈ) ಬ್ರಿ. ಅಹ್ಲವಾಟ್

3. ಕರ್ನಾಟಕದ ಈಗಿನ ಉನ್ನತ ಶಿಕ್ಷಣ ಸಚಿವರು ಇವರು:

ಅ) ತನ್ವೀರ್ ಸೇಠ್
ಆ) ಬಸವರಾಜ ರಾಯರೆಡ್ಡಿ
ಇ) ಎಂ. ಬಿ. ಪಾಟೀಲ್
ಈ) ವಿನಯ್ ಕುಲಕರ್ಣಿ

4. ಸೇನಾದಿನವನ್ನು ಪ್ರತಿವರ್ಷ ಯಾವ ದಿನದಂದು ಭಾರತದಲ್ಲಿ ಆಚರಿಸಲಾಗುತ್ತದೆ?

ಅ) ಜನವರಿ 12
ಆ) ಜನವರಿ 13
ಇ) ಜನವರಿ 14
ಈ) ಜನವರಿ 15

5. ಬಡಗುತಿಟ್ಟು , ತೆಂಕುತಿಟ್ಟು ಎಂಬುವವು ಯಾವ ಕಲಾಪ್ರಕಾರದ ವಿಧಗಳು?
ಅ) ಹರಿಕಥೆ
ಆ) ಭೂತದ ಕೋಲ
ಇ) ಯಕ್ಷಗಾನ
ಈ) ನಾಗಾರಾಧನೆ

6. ‘ಕ್ಲೆಪ್ಟೊಮೇನಿಯಾ’ ಎಂಬ ಶಬ್ದದ ಅರ್ಥ ಏನು?
ಅ) ಕದಿಯುವ ಚಟ
ಆ) ಕಡಿಯುವ ಚಟ
ಇ) ಕುಡಿಯುವ ಚಟ
ಈ) ಹರಿಯುವ ಚಟ

7. ಇಟಲಿಯ ಪ್ರವಾಸಿ ‘ಪಿಯತ್ರೋ ಡೆಲ್ಲ ವೆಲ್ಲೆ’ ಈ ಪ್ರಾಂತ್ಯಕ್ಕೆ ಭೇಟಿ ಕೊಟ್ಟಿದ್ದ:
ಅ) ಮೈಸೂರು
ಆ) ಕೆಳದಿ
ಇ) ಕೊಡಗು
ಈ) ಚಿತ್ರದುರ್ಗ

8. ಇವುಗಳಲ್ಲಿ ಛಾಸರನು ಬರೆದ ಕೃತಿ ಯಾವುದು?

ಅ) ಕಾಲಿಗುಲ
ಆ) ಸಿಂಬಿಲೀನ್
ಇ) ಪಿಕ್ವಿಕ್ ಪೇಪರ್ಸ್
ಈ) ಕ್ಯಾಂಟರ್ ಬರಿ ಟೇಲ್ಸ್

9. ಶ್ರೀನಿವಾಸ ರಾಮಾನುಜಂರಿಗೆ ಗಣಿತಸಂಶೋಧನೆಯಲ್ಲಿ ನೆರವಾದ ಪಾಶ್ಚಾತ್ಯ ಗಣಿತವಿದ ಯಾರು?
ಅ) ಜಿ.ಎಚ್. ಹಾರ್ಡಿ
ಆ) ಥಾಮಸ್ ಹಾರ್ಡಿ
ಇ) ಜೇಮ್ಸ್ ಹಾಡ್ರ್ಲಿ ಚೇಸ್
ಈ) ಯಾರೂ ಅಲ್ಲ

10. ‘ತಮಸ್’- ಈ ಹಿಂದಿ ಕಾದಂಬರಿಯ ಲೇಖಕರು ಯಾರು?
ಅ) ಹಜಾರಿ ಪ್ರಸಾದ್ ದ್ವಿವೇದಿ
ಆ) ಪ್ರೇಮಚಂದ್
ಇ) ಚಂದನ್ ಮಿಶ್ರಾ
ಈ) ಭೀಷ್ಮ ಸಹಾನಿ
 

ಹಿಂದಿನ ಸಂಚಿಕೆಯ ಸರಿಯುತ್ತರಗಳು:

1. (ಆ) ಸುನಂದ ಬೆಳಗಾಂವ್‍ಕರ
2. (ಈ) ಸಾಧನೆಯ ಶಿಖರಾರೋಹಣ
3. (ಅ) ಶಿವಕಾಶಿ
4. (ಇ) ಮಲೇಷಿಯಾ
5. (ಈ) ಕೃಷಿ ಮತ್ತು ತೋಟಗಾರಿಕೆ
6. (ಆ) ಬೆಂಗಳೂರು
7. (ಅ) ರಾಷ್ಟ್ರೀಯ ಜನತಾದಳ
8. (ಆ) ಬಿಟ್‍ಕಾಯಿನ್
9. (ಈ) ನೌಕಾಪಡೆ
10. (ಆ) ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.