ADVERTISEMENT

ಕರ್ನಾಟಕ: ಅಂದಾಜು ಶೇ. 65ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 14:36 IST
Last Updated 17 ಏಪ್ರಿಲ್ 2014, 14:36 IST

ಬೆಂಗಳೂರು (ಪಿಟಿಐ): ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ  ಒಂದೇ ಹಂತದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇಕಡಾ  65 ರಷ್ಟು ಮತದಾನವಾಗಿದೆ.

ಕೇಂದ್ರೀಯ ಭದ್ರತಾ ಪಡೆ ಸೇರಿದಂತೆ 85 ಸಾವಿರ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ನಡೆದ ಮತದಾನ ಚಿಕ್ಕ ಪುಟ್ಟ ಅಹಿತಕರ ಘಟನೆ ಹೊರತು ಪಡಿಸಿ ಬಹುತೇಕ ಶಾಂತವಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಮಧ್ಯಾಹ್ನದ ವೇಳೆಗೆ ಶೇಕಡಾ 25 ರಷ್ಟಿದ್ದ ಮತದಾನ ಮೂರು ಗಂಟೆಯ ವೇಳೆ ಶೇಕಡಾ 47 ರಷ್ಟಾಗಿತ್ತು. ಸಂಜೆ ಐದು ಗಂಟೆಯ ವೇಳೆಗೆ ಶೇಕಡಾ 60ರಷ್ಟು ಮತದಾನವಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್ ಝಾ ತಿಳಿಸಿದ್ದಾರೆ.

ADVERTISEMENT

28 ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಒಟ್ಟು 435 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆ ಸೇರಿದ್ದು, ಮೇ 16 ರಂದು ಮತ ಏಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.