ADVERTISEMENT

ಮನೆ–ಮನೆಗೆ ತೆರಳಿ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:56 IST
Last Updated 16 ಏಪ್ರಿಲ್ 2014, 19:56 IST

ಬೆಂಗಳೂರು: ಲೋಕಸಭಾ ಚುನಾವಣೆ ಮುನ್ನಾದಿನವಾದ ಬುಧವಾರ ನಗರದ ಮೂರೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ­ಗಳು ಮನೆ–ಮನೆಗೆ ತೆರಳಿ ಮತಯಾ­ಚನೆ ಮಾಡಿದರು.

ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಮೋಹನ್‌, ಬೆಳಿಗ್ಗೆ ಶೇಷಾ­ದ್ರಿಪುರ, ಕುಮಾರಪಾರ್ಕ್‌, ನೆಹರು ನಗರ, ಮಾಧವನಗರ, ಬಿನ್ನಿ­ಪೇಟೆ, ಬಳೆಪೇಟೆ, ಅಕ್ಕಿಪೇಟೆ, ಚಾಮರಾ­ಜ­ಪೇಟೆ ಮತ್ತು ಸಂಜೆ ಶಾಂತಿನಗರ, ಜೋಗು­ಪಾಳ್ಯ, ಶಾಂತಲಾ­ನಗರ, ರಿಚ್ಮಂಡ್‌ ಟೌನ್ ಭಾಗಗಳಲ್ಲಿ ಮನೆ–ಮನೆಗೆ ಭೇಟಿ ಮಾಡಿ, ಬೆಂಬಲ ಕೋರಿದರು. ಬೆಂಗಳೂರು ಕೇಂದ್ರ ವ್ಯಾಪ್ತಿಯ ಎಲ್ಲಾ ವಿಧಾನ ಸಭಾ­ಕ್ಷೇತ್ರ­ಗಳಲ್ಲಿ ಮುಖಂಡರಾದ ಎಸ್‌.ಸುರೇಶ್‌­ಕುಮಾರ್, ಅರವಿಂದ ಲಿಂಬಾವಳಿ, ಎಸ್.ರಘು, ಸಚ್ಚಿದಾ­ನಂದಮೂರ್ತಿ, ನಿರ್ಮಲಕು­ಮಾರ್ ಸುರಾನ ಹಾಗೂ ಬಿಬಿಎಂಪಿ ಸದಸ್ಯರು ಮತ್ತು ಪಕ್ಷದ ಮುಖಂಡರು ಮನೆ ಮನೆ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡಿದರು.
 
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಕೆಂಗೇರಿ ಭಾಗದಲ್ಲಿ ಮನೆ–ಮನೆಗೆ ಭೇಟಿ ಮಾಡಿ, ಬೆಂಬಲ ಯಾಚಿಸಿದರು. ಪಕ್ಷದ ಮುಖಂಡರು ಜತೆಗಿದ್ದರು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕ ಜಗದೀಶ­ಕುಮಾರ್‌ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ದಾಸರಹಳ್ಳಿ ಕ್ಷೇತ್ರದಲ್ಲಿ ಶಾಸಕ ಎಸ್‌. ಮುನಿರಾಜು ಮತ­ಯಾಚನೆ ಮಾಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತಕುಮಾರ್‌, ಆರ್‌. ಅಶೋಕ್‌ ಮತ್ತಿತರರು ಮನೆ–ಮನೆಗೆ ತೆರಳಿ ಬೆಂಬಲ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.