ADVERTISEMENT

ಅಕ್ಟೋಬರ್ 6ಕ್ಕೆ ‘ಕಿಡಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಟೋಬರ್ 6ಕ್ಕೆ ‘ಕಿಡಿ’ ತೆರೆಗೆ
ಅಕ್ಟೋಬರ್ 6ಕ್ಕೆ ‘ಕಿಡಿ’ ತೆರೆಗೆ   

ಮಲಯಾಳಂನ ‘ಕಲಿ’ ಸಿನಿಮಾದ ರಿಮೇಕ್ ಚಿತ್ರ ‘ಕಿಡಿ’. ನೃತ್ಯ ನಿರ್ದೇಶಕ ಎಸ್.ರಘು ಈ ಚಿತ್ರದ ಮೂಲಕ ಮೊದಲ ಸಲ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್ 6ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ಮಲಯಾಳಂನ ‘ಕಲಿ’ಯಲ್ಲಿ ದುಲ್ಕರ್‌ ಸಲ್ಮಾನ್‌ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರವನ್ನು ಕನ್ನಡದ ‘ಕಿಡಿ’ಯಲ್ಲಿ ಭುವನ್ ಚಂದ್ರ ನಿರ್ವಹಿಸಿದ್ದಾರೆ. ಕಿರುತೆರೆ ನಟಿ ಪಲ್ಲವಿ ಈ ಚಿತ್ರದ ಮೂಲಕ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.

‘‘ಕೋಪ ಎಂಬುದನ್ನು ಬಹುತೇಕರು ಸಣ್ಣ ವಿಚಾರ ಅಂದುಕೊಂಡಿರುತ್ತಾರೆ. ಎಲ್ಲರ ನಿತ್ಯ ಬದುಕಿನ ಜೊತೆಗಾರನಂತಿರೋ ಈ ಕೋಪ ಯಾಮಾರಿದರೆ ಎಲ್ಲೆಲ್ಲಿಗೋ ಕೊಂಡೊಯ್ದು ಬಿಡುತ್ತದೆ. ಅಂಥಾದ್ದೆ ಭಿನ್ನವಾದ ಕಥಾ ಹಂದರ ಹೊಂದಿರೋ ಚಿತ್ರ ‘ಕಿಡಿ’’ ಎಂದು ಹೇಳುತ್ತಾರೆ ನಿರ್ದೇಶಕ ರಘು.

ADVERTISEMENT

ಹದಿನೈದು ವರ್ಷಗಳಿಂದ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ರಘು ಅವರಿಗಿದೆ. ಮೂಡಿಗೆರೆಯ ಹತ್ತಿರದ ಡಾಬಾದ ಸೆಟ್ ಹಾಕಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಒಂದು ಹಾಡನ್ನು ವಿದೇಶದಲ್ಲಿಯೂ ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.