ADVERTISEMENT

ಅಕ್ಷರಾ ಹಾಸನ್‌ ಒಲವು ನಿಲುವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST

ಬಾಲಿವುಡ್‌ನ ಆ್ಯಂಗ್ರಿ ಯಂಗ್‌ಮ್ಯಾನ್‌ ಅಮಿತಾಭ್‌ ಬಚ್ಚನ್‌, ಕಾಲಿವುಡ್‌ನ ಸೂಪರ್‌ಸ್ಟಾರ್‌ ಧನುಷ್‌ ತಾರಾಗಣವಿರುವ, ಆರ್.ಬಾಲ್ಕಿ ನಿರ್ದೇಶನದ ‘ಶಮಿತಾಭ್’ ಚಿತ್ರ ಇದೇ ವಾರ (ಫೆಬ್ರುವರಿ 6) ತೆರೆಕಾಣಲಿದೆ.

ಪ್ರಥಮ ಚಿತ್ರದಲ್ಲೇ ಜನಪ್ರಿಯ ನಟರೊಂದಿಗೆ ಕಾಣಿಸಿಕೊಂಡಿರುವ ಕಮಲ್‌ ಹಾಸನ್‌ ಪುತ್ರಿ ಅಕ್ಷರಾ ಹಾಸನ್‌ ತಾವು ಆಯ್ಕೆ ಮಾಡಿಕೊಳ್ಳುವ ಪಾತ್ರಗಳ ಕುರಿತಂತೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.

ಅಕ್ಷರಾ ಹಾಸನ್‌ ಒಬ್ಬ ನಟಿಯಾಗಿ ತಾನು ಇಂತದ್ದೇ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳಬೇಕು ಎಂದು ಮಿತಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲವಂತೆ. ‘ಮಿತಿ ಇಟ್ಟುಕೊಂಡು ನಟಿಸಲು ಶುರುಮಾಡಿದರೆ, ಕಲಾವಿದೆ ತಾನು ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ.

ಹಾಗಾಗಿ, ತೆರೆಯ ಮೇಲೆ ನಾನು ಕೇವಲ ಮಡಿವಂತಿಕೆಯ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳಬೇಕು ಎಂದು ಬಯಸುವುದಿಲ್ಲ. ಚಿತ್ರಕಥೆ ಬೇಡುವಂತಿದ್ದರೆ ಬೋಲ್ಡ್‌ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧಳಿದ್ದೇನೆ’ ಎಂದಿದ್ದಾರೆ 24ರ ಚೆಲುವೆ ಅಕ್ಷರಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.