ADVERTISEMENT

ಆಗಸ್ಟ್‌ಗೆ ಫಸ್ಟ್‌ ಲವ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಆಗಸ್ಟ್‌ಗೆ ಫಸ್ಟ್‌ ಲವ್
ಆಗಸ್ಟ್‌ಗೆ ಫಸ್ಟ್‌ ಲವ್   

ಅಶೋಕ್ ಲಮಾಣಿ ನಿರ್ಮಿಸುತ್ತಿರುವ ‘ಫಸ್ಟ್ ಲವ್’ ಚಿತ್ರ ವಿನೂತನ ಪ್ರೇಮಕಥನ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರ ಸೆನ್ಸಾರ್ ಮಂಡಳಿಯ ಅಂಗಳದಲ್ಲಿ ಇದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಎಫ್‌.ಎಂ ವಾಹಿನಿಯೊಂದರಲ್ಲಿ ಆರ್‌ಜೆ ಆಗಿರುವ ರಾಜೇಶ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಕವಿತಾ ಗೌಡ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆಯುತ್ತಿದ್ದಾರೆ.

ಆಯುಷ್ಮಾನ್ ಅವರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುರೇಶ್‍ಬಾಬು ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ, ಜಯಂತ ಕಾಯ್ಕಿಣಿ, ಗೌಸ್‍ ಪೀರ್ ಸಾಹಿತ್ಯ ಇದೆ. ಸ್ನೇಹಾ, ರಾಜು ತಾಳಿಕೋಟೆ, ಅರುಣ್ ಬಾಲರಾಜ್, ಪ್ರಶಾಂತ್ ಸಿದ್ಧಿ, ಲಕ್ಷ್ಮಣ್ ಸಿದ್ದೇಶ್, ಧರ್ಮೇಂದ್ರ ಅರಸ್ ತಾರಾಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.