ADVERTISEMENT

ಕನ್ನಡಕ್ಕೆ ಬರ್ತಾರಾ ಸಾಯಿ ಪಲ್ಲವಿ !

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 7:01 IST
Last Updated 17 ನವೆಂಬರ್ 2017, 7:01 IST
ಕನ್ನಡಕ್ಕೆ ಬರ್ತಾರಾ ಸಾಯಿ ಪಲ್ಲವಿ !
ಕನ್ನಡಕ್ಕೆ ಬರ್ತಾರಾ ಸಾಯಿ ಪಲ್ಲವಿ !   

 ಬೆಂಗಳೂರು:  ‘ಸಾಯಿಪಲ್ಲವಿ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ‘ಪ್ರಜ್ವಲ್ ದೇವರಾಜ್ ಜೊತೆಗೆ ಸಾಯಿ ಪಲ್ಲವಿ ತೆರೆ ಹಂಚಿಕೊಳ್ಳಲಿದ್ದಾರೆ’ ಎಂಬುದು ಈ ಸುದ್ದಿಯ ಮುಂದುವರಿದ ಭಾಗ.

ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ರಮೇಶ್‌ ಅರವಿಂದ್ ಅಭಿನಯದ ‘ಪುಷ್ಪಕ ವಿಮಾನ’ ನಿರ್ಮಿಸಿದ್ದ ವಿಖ್ಯಾತ್ ಈ ಚಿತ್ರವನ್ನೂ ನಿರ್ಮಿಸಲಿದ್ದು, ಪವನ್‌ ಒಡೆಯರ್ ಅವರ ಜೊತೆ ಕೆಲಸ ಮಾಡಿದ ಅನುಭವ ಇರುವ ನರಸಿಂಹ ಅವರು ಚಿತ್ರ ನಿರ್ದೇಶನದ ಹೊಣೆಹೊರಲಿದ್ದಾರೆ.

‘ಪಲ್ಲವಿಯ ಡೇಟ್ಸ್‌ಗಾಗಿ ಮಾತುಕತೆ ನಡೆಯುತ್ತಿವೆ. ಈ ಚಿತ್ರದಲ್ಲಿ ಅವರದ್ದು ತಮಾಷೆ ಪೊಲೀಸಮ್ಮನ ಪಾತ್ರ’ ಎನ್ನುವುದು ಚಂದನವನದ ಗಲ್ಲಿಮಾತು.

ADVERTISEMENT

ಮಲೆಯಾಳಂನ ‘ಪ್ರೇಮಂ’ ಸಿನಿಮಾದ ಮಲರ್ ಪಾತ್ರದಲ್ಲಿ ಮಿಂಚಿದ್ದ ಸಾಯಿ ಪಲ್ಲವಿ ತಮ್ಮ ಅಭಿನಯದಿಂದ ಮನೆಮಾತಾಗಿದ್ದರು. ದುಲ್ಕರ್‌ ಸಲ್ಮಾನ್ ಜೊತೆಗೆ ಅವರು ಅಭಿನಯಿಸಿದ್ದ ‘ಕಲಿ’ ಚಿತ್ರವನ್ನು ‘ಹೇಯ್ ಪಿಲ್ಲಗಾಡ’ ಹೆಸರಿನಲ್ಲಿ ತೆಲುಗಿಗೆ ತರುವ ಸಿದ್ಧತೆಗಳು ನಡೆದಿವೆ. ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ತೆಲುಗಿನ ‘ಫಿದಾ’ ಚಿತ್ರದ ಅಭಿನಯ ಮತ್ತು ಡಾನ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.