ADVERTISEMENT

'ಕರಾಟೆ ಕಿಂಗ್' ಶಂಕರ್‍‍ನಾಗ್‍ರನ್ನು ಸ್ಮರಿಸಿದ ನೆಟಿಜನ್‍ಗಳು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:58 IST
Last Updated 9 ನವೆಂಬರ್ 2017, 8:58 IST
'ಕರಾಟೆ ಕಿಂಗ್' ಶಂಕರ್‍‍ನಾಗ್‍ರನ್ನು ಸ್ಮರಿಸಿದ ನೆಟಿಜನ್‍ಗಳು
'ಕರಾಟೆ ಕಿಂಗ್' ಶಂಕರ್‍‍ನಾಗ್‍ರನ್ನು ಸ್ಮರಿಸಿದ ನೆಟಿಜನ್‍ಗಳು   

ಬೆಂಗಳೂರು: ನಟ ಶಂಕರ್‍‍ನಾಗ್ ಅವರ ಹುಟ್ಟುಹಬ್ಬ ಇಂದು. ಕರಾಟೆ ಕಿಂಗ್ ಶಂಕರ್ ನಾಗ್ ಅಗಲಿ ದಶಕಗಳೇ ಕಳೆದಿದ್ದರೂ ಜನಮಾನಸದಲ್ಲಿ ಅವರು ಎಂದಿಗೂ ಅಮರ.

ಕನ್ನಡ ಚಿತ್ರರಂಗದ ಮತ್ತು ರಂಗಭೂಮಿಯ ಪ್ರಮುಖ ನಾಯಕ ನಟ ಮತ್ತು ನಿರ್ದೇಶಕರಾಗಿದ್ದ ಶಂಕರ್ ನಾಗ್ (ನಾಗರಕಟ್ಟೆ ಶಂಕರ್) ಬದುಕಿದ್ದಿದ್ದರೆ ಇಂದಿಗೆ 63 ವರ್ಷ ತುಂಬುತ್ತಿತ್ತು. ರಾಜ್ಯದಾದ್ಯಂತವಿರುವ ಶಂಕರ್ ನಾಗ್ ಅಭಿಮಾನಿಗಳು ಇಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ನಗರ ವಿವಿಧ ಭಾಗಗಳಲ್ಲಿ ಶಂಕ್ರಣ್ಣನ ಪೋಸ್ಟರ್‍‌ಗಳನ್ನು ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅಭಿಮಾನಿ ಸಂಘಗಳು ಕೇಕ್ ಕತ್ತರಿಸಿ, ರಕ್ತದಾನ ಶಿಬಿರ ನಡೆಸುವ ಮೂಲಕವೂ ಶಂಕರ್ ನಾಗ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ADVERTISEMENT

ಇತ್ತ  ಸಾಮಾಜಿಕ ತಾಣಗಳಲ್ಲಿಯೂ ನೆಟಿಜನ್‌‍ಗಳು ಶಂಕರ್ ನಾಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.