ADVERTISEMENT

‘ಕಾನ್‌’ನಲ್ಲಿ ಆರಾಧ್ಯಾ

​ಪ್ರಜಾವಾಣಿ ವಾರ್ತೆ
Published 19 ಮೇ 2017, 19:30 IST
Last Updated 19 ಮೇ 2017, 19:30 IST
‘ಕಾನ್‌’ನಲ್ಲಿ ಆರಾಧ್ಯಾ
‘ಕಾನ್‌’ನಲ್ಲಿ ಆರಾಧ್ಯಾ   

ಫ್ರಾನ್ಸ್‌ನ ಕಾನ್‌ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿರುವ ಐರ್ಶ್ವರ್ಯಾ ರೈ ಬಚ್ಚನ್ ಈ ಬಾರಿ ತಮ್ಮ ಐದು ವರ್ಷದ ಮಗಳನ್ನೂ ಕರೆದುಕೊಂಡು ಹೋಗಿದ್ದಾರೆ. ಫ್ರಾನ್ಸ್‌ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಐಶ್ವರ್ಯಾ ರೈ ಅವರನ್ನು ಕಾನ್‌ ಸಿನಿಮೋತ್ಸವ ಸ್ವಯಂಸೇವಕ ಫ್ರೆಂಚ್‌ ವಿಶೇಷ ಗುಲಾಬಿಗಳನ್ನು ನೀಡಿ ಸ್ವಾಗತಿಸಿದರು.

ಅಮ್ಮನೊಂದಿಗೆ ಬಂದಿದ್ದ ಆರಾಧ್ಯಾ ವಿಶೇಷ ಆಕರ್ಷಣೆಯಾಗಿ ಮಾಧ್ಯಮದವರ ಗಮನ ಸೆಳೆದಳು. ರೆಡ್‌ಕಾರ್ಪೆಟ್‌ ಮೇಲೆ ನಡೆಯಲು ಅಮ್ಮನೊಂದಿಗೆ ತಾನು ಸಿದ್ಧವಾಗಿರುವಂತೆ ಕ್ಯಾಮರಾ ಎದುರು ಪೋಸ್‌ ನೀಡುತ್ತಿದ್ದಳು ಆರಾಧ್ಯಾ. ತಮ್ಮ ಮಗಳ ಮುದ್ದಾದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ ಐಶ್ವರ್ಯಾ. ನೀಲಿ ಡೆನಿಮ್ ಟಾಪ್‌, ಬಿಳಿಯ ಸ್ಟಾಕಿಂಗ್ಸ್‌, ಸ್ಪೋರ್ಟ್‌ ಶೂ, ದೊಡ್ಡ ಹೂವಿನ ಹೇರ್‌ಬ್ಯಾಂಡ್‌ ತೊಟ್ಟಿದ್ದಳು ಆರಾಧ್ಯಾ. ಅಮ್ಮ ಐಶ್ವರ್ಯಾ ನ್ಯೂಡ್‌ ಬಣ್ಣದ ಕೋಟ್‌, ಜೀನ್ಸ್‌, ಪಂಪ್‌  ಶೂ, ಕೆಂಪು ತುಟಿ ಬಣ್ಣದೊಂದಿಗೆ ಕಂಗೊಳಿಸುತ್ತಿದ್ದರು.

ಲೋರಿಯಲ್ ಬ್ರ್ಯಾಂಡ್ ರಾಯಭಾರಿಯಾಗಿ ಸಿನಿಮೋತ್ಸವದಲ್ಲಿ ಭಾಗವಹಿಸಿರುವ ಐಶ್ವರ್ಯಾ ಈ ಬಾರಿ ತಮ್ಮ ಮಗಳ ಜತೆ ಬಂದಿದ್ದು ವಿಶೇಷವಾಗಿತ್ತು. ಹಲವು ವರ್ಷಗಳಿಂದ ಕಾನ್‌ ಸಿನಿಮೋತ್ಸವದಲ್ಲಿ ಐಶ್ವರ್ಯಾ ರೈ ಭಾಗವಹಿಸುತ್ತಾ ಬಂದಿದ್ದಾರೆ. ದೀಪಿಕಾ, ಪ್ರಿಯಾಂಕಾ  ಛೋಪ್ರಾ ಸರದಿಯೂ ಕಳೆದು ಸೋನಂ ಕಪೂರ್‌ ರೆಡ್‌ ಕಾರ್ಪೆಟ್ ಮೇಲೆ ನಡೆಯುವ ದಿನವನ್ನು ಕಾಯುತ್ತಿದ್ದಾರೆ ಅಭಿಮಾನಿಗಳು.

ADVERTISEMENT

ಕಾನ್‌ನಲ್ಲಿ ಮಿಂಚುತ್ತಿದೆ ದೀಪಿಕಾ ಕೂದಲು
ಕಾನ್‌ ಸಿನಿಮೋತ್ಸವದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಈ ಬಾರಿ ತಮ್ಮ ಕೂದಲ ವಿಶೇಷ ವಿನ್ಯಾಸದಿಂದ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣಕರ್ತರು ಮುಂಬೈ ಬಾಂದ್ರಾ ಮೂಲದ ಕೇಶವಿನ್ಯಾಸಕಿ ಕ್ಲಾರಾಬೆಲ್‌ ಸಾಲ್ಡಾನಾ.

ಸಮೃದ್ಧವಾದ ದೀಪಿಕಾ ಕೂದಲಿಗೆ  ಚಿನ್ನದ ವರ್ಣದ ಮೀಡಿಯಂ, ಲೋ ಸ್ಟ್ರೀಕ್ ಶೇಡ್‌ಗಳನ್ನು ಮಾಡಿದ್ದಾರೆ ಕ್ಲಾರಾಬೆಲ್‌. ಜೊತೆಗೆ ಹೊಳೆಯುವ ಬೌನ್ಸಿಹೇರ್‌ ಮಾಡಿ ಕೂದಲು ದಟ್ಟವಾಗಿ ಕಾಣುವಂತೆ ಮಾಡಿದ್ದಾರೆ.  ‘ದೀಪಿಕಾ ಚರ್ಮದ ಬಣ್ಣಕ್ಕೆ ಚಿನ್ನದ ಬಣ್ಣ ಸೂಕ್ತವಾಗಿ ಹೊಂದುತ್ತದೆ. ಕೂದಲಿಗೆ ಲೇಯರ್ ಕಟ್ ಮಾಡಿ, ಬಣ್ಣ ಮಾಡಿರುವುದರಿಂದ ಅವರ ಕೂದಲಿನ ಪದರಗಳು ಹೆಚ್ಚಾಗಿ ಕಾಣುತ್ತಿವೆ. ಇದರ ಜೊತೆ ಬ್ಲೋ ಡ್ರೈ ಮಾಡಿ ಕೂದಲು ಇನ್ನೂ ದಟ್ಟವಾಗಿ ಕಾಣುವಂತೆ ಮಾಡಿದ್ದೇನೆ’ ಎನ್ನುತ್ತಾರೆ ಕ್ಲಾರಾಬೆಲ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.