ADVERTISEMENT

ಜಾಯಮಾನ ಮೀರಿದ ಪ್ರೇಮದ ಘಮ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 2:49 IST
Last Updated 21 ಜುಲೈ 2017, 2:49 IST
ಜಾಯಮಾನ ಮೀರಿದ ಪ್ರೇಮದ ಘಮ
ಜಾಯಮಾನ ಮೀರಿದ ಪ್ರೇಮದ ಘಮ   

ಬದುಕಿನಾ ಬಣ್ಣವೆ ಬದಲಾದರೆ ಅದು ಪ್ರೇಮವೆ

ಬಡವನಾ ಕಣ್ಣಲೂ ಬೆಳಕಾದರೆ ಅದು ಪ್ರೇಮವೆ

ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೆ

ADVERTISEMENT

ತಿರುವಲಿ ದೇವರೆ ಎದುರಾದರೆ ಅದು ಪ್ರೇಮವೆ

ಗಾಳಿಯಲಿ ಬೆಚ್ಚನೆ ಅಲೆಯಿದೆ

ಹೃದಯಕೆ ದಾರಿ ಹೇಗೋ ಗೊತ್ತಾಗಿದೆ

ನಕ್ಷೆಯಾ ನೀಡದೆ...

ತಲುಪದಾ ಕರೆ ನೂರಾರಿವೆ

ಬೆರಳಲೇ ಇದೆ ಸಂಭಾಷಣೆ

ಕನಸಿಗೂ ಸಹ ಕಂದಾಯವೆ

ವಿರಹವೇ ಕಿರು ಸಂಭಾವನೆ

ಉಳಿವೆನೆ ನಾನು...

ಕಳೆದರೆ ನೀನು...

ನೆಪವಿರದೆ ನಿನ್ನ ಅಪಹರಿಸಿ ತಂದೆ

ಉಪಕರಿಸು ಶಿಕ್ಷೆಯಾ ನೀಡದೆ...

ಸೆಳೆತಕೆ ಕಾರಣಾ ಸಿಗದಾದರೆ ಅದು ಪ್ರೇಮವೆ

ಹೆಸರನು ಕೂಗಿದಾ ಭ್ರಮೆಯಾದರೆ ಅದು ಪ್ರೇಮವೆ

ಬರೆಯದಾ ಕಾಗದಾ ಪ್ರಿಯವಾದರೆ ಅದು ಪ್ರೇಮವೆ

ತೊರೆಯಲು ಜೀವಕೆ ಭಯವಾದರೆ ಅದು ಪ್ರೇಮವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.