ADVERTISEMENT

‘ಜೂಲಿ 2’ ನಟಿಯೊಬ್ಬರ ನಿಜ ಜೀವನದ ಕಥೆ ಆಧರಿಸಿದ ಚಿತ್ರ; ನಟಿಯ ಗುಟ್ಟು ಬಿಟ್ಟುಕೊಡದ ಪಹ್ಲಜ್‌ ನಿಹಲಾನಿ

ಏಜೆನ್ಸೀಸ್
Published 19 ನವೆಂಬರ್ 2017, 9:10 IST
Last Updated 19 ನವೆಂಬರ್ 2017, 9:10 IST
ಪಹ್ಲಜ್‌ ನಿಹಲಾನಿ ಜತೆಗೆ ಲಕ್ಷ್ಮೀ ರೈ
ಪಹ್ಲಜ್‌ ನಿಹಲಾನಿ ಜತೆಗೆ ಲಕ್ಷ್ಮೀ ರೈ   

ಮುಂಬೈ: ‘ಜೂಲಿ 2’ ಚಿತ್ರ ನಟಿಯೊಬ್ಬರ ನಿಜ ಜೀವನದ ಕಥೆಯನ್ನು ಆಧರಿಸಿದ್ದು ಎಂದಿರುವ ನಿರ್ಮಾಪಕ ಪಹ್ಲಜ್‌ ನಿಹಲಾನಿ ಆ ನಟಿಯ ಹೆಸರನ್ನು ಬಹಿರಂಗ ಪಡಿಸಲು ಹಿಂದೇಟು ಹಾಕಿದ್ದಾರೆ.

‘1990 ಮತ್ತು 2000ರ ನಡುವೆ ಬಹಳ ಜನಪ್ರಿಯರಾಗಿದ್ದ ಗ್ಲಾಮರ್‌ ನಟಿಯೊಬ್ಬರ ನಿಜ ಜೀವನದ ಘಟನೆಗಳನ್ನು ಆಧರಿಸಿ ‘ಜೂಲಿ 2’ ಚಿತ್ರದ ಕಥೆ ರೂಪಿಸಲಾಗಿದೆ. ಖಾನ್ ಸೂಪರ್ ಸ್ಟಾರ್‌ಗಳ ಜತೆಗೆ ಹಿಂದಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಅವರು’ ಎಂದು ನಿಹಲಾನಿ ತಿಳಿಸಿದ್ದಾರೆ.

‘ಹಿಂದಿ ಚಿತ್ರರಂಗದ ಮೂಲಕ ಸಿನಿಲೋಕಕ್ಕೆ ಬಂದರೂ ಅವರು ಹೆಚ್ಚು ಮಿಂಚಿದ್ದು ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ. ತೆಲುಗು ಮತ್ತು ತಮಿಳು ಚಿತ್ರಗಳಿಂದ ಹೆಸರು ಮಾಡಿದ್ದ ಅವರು ವಿವಾಹಿತರಾಗಿದ್ದ ದಕ್ಷಿಣದ ನಟರೊಬ್ಬರ ಜತೆಗೆ ಸಂಬಂಧ ಹೊಂದಿದ್ದರು. ಬಳಿಕ ದಕ್ಷಿಣ ಭಾರತದ ಚಿತ್ರೋದ್ಯಮದಿಂದ ದೂರಾದ ಅವರು ಭೋಜ್‌ಪುರಿ ಸಿನಿಮಾಗಳ ಖ್ಯಾತರಾದರು’ ಎಂದು ನಿಹಲಾನಿ ಹೇಳಿದ್ದಾರೆ.

ADVERTISEMENT

‘ಚಿತ್ರದಲ್ಲಿನ ನನ್ನ ಪಾತ್ರ ನಟಿಯೊಬ್ಬರ ಜತೆಗೆ ತಾಳೆಯಾಗುತ್ತದೆ. ಅದು ನಿಜವೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ’ ಎಂದು ‘ಜೂಲಿ 2’ದಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಕ್ಷ್ಮೀ ರೈ ಹೇಳಿದ್ದಾರೆ. ದೀಪಕ್‌ ಶಿವದಾಸನಿ ಈ ಚಿತ್ರ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.