ADVERTISEMENT

‘ಟೂಬ್‌ಲೈಟ್‌’ ಚಿತ್ರ ವಿತರಕರಿಗೆ ₹35 ಕೋಟಿ ಮರುಪಾವತಿಸಲು ಸಲ್ಮಾನ್‌ ಖಾನ್ ನಿರ್ಧಾರ

ಏಜೆನ್ಸೀಸ್
Published 11 ಆಗಸ್ಟ್ 2017, 11:05 IST
Last Updated 11 ಆಗಸ್ಟ್ 2017, 11:05 IST
‘ಟೂಬ್‌ಲೈಟ್‌’ ಚಿತ್ರ ವಿತರಕರಿಗೆ ₹35 ಕೋಟಿ ಮರುಪಾವತಿಸಲು ಸಲ್ಮಾನ್‌ ಖಾನ್ ನಿರ್ಧಾರ
‘ಟೂಬ್‌ಲೈಟ್‌’ ಚಿತ್ರ ವಿತರಕರಿಗೆ ₹35 ಕೋಟಿ ಮರುಪಾವತಿಸಲು ಸಲ್ಮಾನ್‌ ಖಾನ್ ನಿರ್ಧಾರ   

ನವದೆಹಲಿ: ಟೂಬ್‌ಲೈಟ್‌ ಚಿತ್ರದ ವಿತರಕರು ಹಾಗೂ ಪ್ರದರ್ಶಕರಿಗೆ ನಷ್ಟದ ಪರಿಹಾರವಾಗಿ ಸಲ್ಮಾನ್‌ ಖಾನ್ ₹35 ಕೋಟಿ ಮರುಪಾವತಿಸುತ್ತಿರುವುದಾಗಿ ವಹಿವಾಟು ವಿಶ್ಲೇಷಕ ಕೋಮಲ್‌ ನಹ್ತಾ ಟ್ವೀಟ್‌ ಮಾಡಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ’ಟ್ಯೂಬ್‌ಲೈಟ್‌’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವ ಜತೆಗೆ ಸಲ್ಮಾನ್‌ ಖಾನ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ನಿರೀಕ್ಷೆ ಹೊಂದಿದ್ದ ಸಿನಿಮಾ ಹಣ ಗಳಿಕೆಯಲ್ಲಿ ವಿಫಲವಾಗಿ ವಿತರಕರು ನಷ್ಟ ಅನುಭವಿಸಿದರು. ಚಿತ್ರದ ವಿತರಕರ ನಷ್ಟ ಭರಿಸುವುದಾಗಿ ಸಲ್ಮಾನ್‌ ಖಾನ್‌ ಭರವಸೆ ನೀಡಿದ್ದರು.

‘ಭಜರಂಗಿ ಭಾಯಿಜಾನ್’ ನಟ ಟ್ಯೂಬ್‌ಲೈಟ್‌ ಸಿನಿಮಾದಿಂದ ಆದ ನಷ್ಟದ ಪರಿಹಾರವಾಗಿ ವಿತರಕರು ಮತ್ತು ಪ್ರದರ್ಶಕರಿಗೆ ₹35 ಕೋಟಿ ಮರುಪಾವತಿ ಮಾಡಲಿದ್ದಾರೆ’ ಎಂದು ಕೋಮಲ್‌ ನಹ್ತಾ ಟ್ವೀಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.